ಮಂಗಳೂರು : ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೇ ವಾರ್ಷಿಕ ಮಹಾ ಸಂಭ್ರಮವು ಫೆಬ್ರವರಿ 18ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಲಿದೆ. ಈ ಸಂಭ್ರಮಕ್ಕೆ ಅಂತರ್‍ರಾಷ್ಟ್ರೀಯ ಪ್ರಭಾಷಣಗಾರ ಜನಮನಗೆದ್ದ ಖ್ಯಾತ ವಾಗ್ಮಿ ಎ. ಎಂ. ನೌಶಾದ್ ಬಾಖವಿ ನೆಹರು ಮೈದಾನಕ್ಕೆ ಪ್ರಪ್ರಥಮವಾಗಿ ಆಗಮಿಸಲಿದ್ದು ಇದರ ಪ್ರಚಾರಾರ್ಥವಾಗಿ ಇಂದು 4ರಂದು ಬೆಂಗರೆಯ ಓಲ್ಡ್ ಸ್ಟೂಡೆಂಟ್ ಫೆಡರೇಶನ್ ಕಛೇರಿಯಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಸನ್ ಬೆಂಗರೆಯ ಅಧ್ಯಕ್ಷತೆಯಲ್ಲಿ ಪ್ರಚಾರ ಸಭೆ ಸೇರಿ ಸಮಾರಂಭವನ್ನು ಕೆ. ಎಲ್. ಉಮರ್ ದಾರಿಮಿ ಉದ್ಘಾಟಿಸಿದರು.

IMG-20170204-WA0161ಮುಸ್ತಫ ಫೈಝಿ ಕಿನ್ಯ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಬೆಂಗರೆ ಜಮಾಅತ್ ಉಪಾಧ್ಯಕ್ಷ ಬಿಲಾಲ್ ಮೊೈದಿನ್, ಇಬ್ರಾಹಿಂ ಬೆಂಗರೆ, ಉಮರಬ್ಬ ಹಾಜಿ ಉಪಸ್ಥಿತರಿದ್ದರು. ಪ್ರಚಾರದ ಪ್ರಯುಕ್ತ ಪ್ರಚಾರ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ. ಎಂ. ಹನೀಫ್, ಉಪಾಧ್ಯಕ್ಷರಾಗಿ ಎಂ. ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಬಿಲಾಲ್ ಮೊೈದಿನ್, ಕಾರ್ಯದರ್ಶಿಗಳಾಗಿ ಎಂ. ಆಸೀಫ್, ಕೋಶಾಧಿಕಾರಿ ಎಂ. ಇಬ್ರಾಹಿಂ, ಹಸನ್ ಬೆಂಗರೆ, ಹಾಜಿ ಉಮರ್, ಫಯಾಝ್ ಇಬ್ರಾಹಿಂ, ಬಿ. ಎಂ. ಮುಸ್ತಫ, ನಿಸಾರ್ ಸಿ. ಬಿ., ಹಮೀದ್‍ಇದ್ದಿನ್, ಮಝಾರ್, ಆರೂನ್, ಇಮ್ರಾನ್, ರಿಯಾಝ್, ಆರೂನ್ ನಿಝಾರ್, ಮುಹಾದ್, ನಿಯಾಝ್, ಸೆಲೀಂ ಎಂ., ಸಿದ್ಧೀಕ್ ಎಂ, ಬಿಲಾಲ್ ಯೂಸುಫ್, ಅಶ್ರಫ್, ಇಬ್ರಾಹಿಂ ಖಲೀಲ್ ಮೊದಲಾದವರನ್ನು ಪ್ರಚಾರ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಮೊದಲಿಗೆ ಮುಸ್ತಫ ಫೈಝಿ ಸ್ವಾಗತಿಸಿ ಕೊನೆಗೆ ಉಮರ್ ಹಾಜಿ ಮುಗಿಸಿದರು ಎಂದು ಮುಸ್ತಫ ಫೈಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *