ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಡಳಿತ, ಕುಡ್ಲ ಸೌಹಾರ್ದ ಸಹಕಾರಿ (ನಿ), ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಮತ್ತಿತರ ಸಂಸ್ಥೆಯ ಸಂಸ್ಥೆಗಳ ಸಂಯುಕ್ತ ಸಹಭಾಗಿತ್ವದಲ್ಲಿ ಫೆ 4 ರಂದು ಶನಿವಾರ ದಕ್ಷಿಣ ಕನ್ನಡ ರಿಕ್ಷಾ ಚಾಲಕರ  ಸಂಘದ ಸದಸ್ಯರಿಗೆ ಪ್ರಥಮ ಚಿಕಿತ್ಸೆಯ ತರಬೇತಿ ನೀಡಲಾಯಿತು.20170204_103033 (1)

ನಿಟ್ಟೆ ವಿಶ್ವ ವಿದ್ಯಾಲಯದ ಕ್ಷೇಮ ವೈದ್ಯಕೀಯ ವಿದ್ಯಾಲಯದ ಕೆ ಯಸ್ ಹೆಗ್ಡೆ ಆಸ್ಪತ್ರೆಯ ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕರಾದ ಡಾ ಶ್ರೀಪಾದ ಮೆಹೆಂದಳೆ, ಡಾ ಸುಮಲತಾ ಶೆಟ್ಟಿ ಹಾಗೂ ಇತರ ವೈದ್ಯರು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚಿನ ಸಂಖ್ಯೆಯ ರಿಕ್ಷಾ ಚಾಲಕರು ಪಾಲ್ಗೊಂಡು ತರಬೇತಿ ಪಡೆದರು. ಉರ್ವದ ರಾಧಾಕೃಷ್ಣ ಮಂದಿರದಲ್ಲಿ ನಡೆದ ಈ ಶಿಬಿರದಲ್ಲಿ, ಮಂಗಳೂರಿನ ಕಾರ್ಮಿಕ ಆಯುಕ್ತ ಶ್ರೀ ಮೈಲಾರಪ್ಪ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಶ್ರೀ ಶಾಂತಾರಾಮ್ ಶೆಟ್ಟಿ, ಕಾರ್ಯದರ್ಶಿ ಡಾ ರಾಜೇಶ್ ಬಿ ವಿ, ಕುಡ್ಲ ಸೌಹಾರ್ದ ಸಹಕಾರಿ (ನಿ)ದ ಅಧ್ಯಕ್ಷ ಶ್ರೀ ಪ್ರಕಾಶ್ ವಿ, ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *