ಮಂಗಳೂರು : ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿ ಹೊರತರುವ ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೇ ವಾರ್ಷಿಕ ಮಹಾ ಸಂಭ್ರಮ ಫೆಬ್ರವರಿ 18ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಲಿದೆ. ಈ ಸಂಭ್ರಮಕ್ಕೆ ಅಂತರ್‍ರಾಷ್ಟ್ರೀಯ ಪ್ರಭಾಷಣಗಾರ ಜನಮನಗೆದ್ದ ಖ್ಯಾತ ವಾಗ್ಮಿ ಎ. ಎಂ. ನೌಶಾದ್ ಬಾಖವಿ ನೆಹರು ಮೈದಾನಕ್ಕೆ ಪ್ರಪ್ರಥಮವಾಗಿ ಆಗಮಿಸಲಿದ್ದು ಇದರ ಪ್ರಚಾರಾರ್ಥವಾಗಿ ಇಂದು 1ರಂದು ಮಂಗಳೂರಿನ ಸ್ವಾಗತ ಸಮಿತಿ ಕಛೇರಿಯಲ್ಲಿ ಸಿರಸಿ ಆನ್‍ಗಲ್ ದಾರುಲ್ ಹುದಾ ಯೂನಿವರ್ಸಿಟಿಯ ವ್ಯವಸ್ಥಾಪಕರು ಉದ್ಯಮಿಯೂ ಆದ ಎಚ್.ಕೆ.ಎಚ್. ಅಬ್ದುಲ್ ಕರೀಮ್ ಹಾಜಿ ಸಿರಸಿ ಪ್ರಚಾರಾರ್ಥವಾಗಿ ಹೊರತಂದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿ ಈ ಕಾರ್ಯಕ್ರಮದ ಮೂಲಕ ಮಾದಕ ದ್ರವ್ಯ ಅಮಲು ಪದಾರ್ಥ ರಾಸಾಯನಿಕ ವಸ್ತುಗಳ ನಿರ್ಮೂಲನ ಮಾಡಬೇಕೆಂದು ಹೇಳಿದರು.

20170201_143035ಸ್ವಾಗತ ಸಮಿತಿ ಅಧ್ಯಕ್ಷರಾದ ಎ. ಎಚ್. ನೌಶಾದ್ ಹಾಜಿ ಸೂರಲ್ಪಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮಿನ್ ಅಧ್ಯಕ್ಷರಾದ ಕೆ. ಎಲ್. ಉಮರ್ ದಾರಿಮಿ ಪಟ್ಟೋರಿ, ಸುನ್ನೀ ಸಂದೇಶ ಪತ್ರಿಕೆಯ ಪ್ರಧಾನ ಸಂಪಾದಕರಾದ ಕೆ.ಎಸ್. ಹೈದರ ದಾರಿಮಿ, ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಮುಸ್ತಫ ಫೈಝಿ ಕಿನ್ಯ, ಸಿದ್ಧೀಕ್ ಫೈಝಿ ಕರಾಯ, ಅಬ್ದುಲ್ಲ ಹಾಜಿ ಬೆಳ್ಮ, ರಫೀಕ್ ಮೌಲವಿ ಅಜ್ಜಾವರ, ಬಶೀರ್ ಅಝ್‍ಹರಿ ಬಾಯಾರ್, ಅಬ್ದುಲ್ ಜಲೀಲ್ ಅಲ್‍ರಮಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಂಗಳೂರು, ಅಬ್ದುಲ್ ಖಾದರ್ ರಂತಡ್ಕ, ಮುಹಮ್ಮದ್ ಉಪ್ಪಳ, ಫರ್‍ವೇಸ್ ಉಳ್ಳಾಲ, ಅಬ್ದುಲ್ಲತೀಫ್ ಕಾಟಿಪಳ್ಳ, ಇಕ್ಬಾಲ್ ಬಾಳಿಲ, ಉನೈಸ್ ಪೆರಾಜೆ, ಅಶ್ರಫ್ ಪೆರ್ಲಂಬಾಡಿ, ಇರ್ಷಾದ್ ಕೆರೆಕಾಡು ಮೊದಲಾದವರು ಉಪಸ್ಥಿತರಿದ್ದರು ಎಂದು ಮುಸ್ತಫ ಫೈಝಿ ್ಲ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *