ಬಂಟ್ವಾಳ : ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ.7ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ತೆಂಗು ಬೆಳೆಗಾರರ ಪಡರೇಶನ್ ಆಶ್ರಯದಲ್ಲಿ ಸಜೀಪಮೂಡ ತೆಂಗು ಬೆಳೆಗಾರರ ಸೊಸೈಟಿಯನ್ನು ಮಂಗಳೂರು ತೆಂಗು ಬೆಳೆಗಾರರ ಪಡರೇಶನ್ ಅಧ್ಯಕ್ಷ ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ ,ತುಂಬೆ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್,ಕಾರ್ಯದರ್ಶಿ ಎನ್.ಕೆ.ಇದಿನಬ್ಬ,ತಾಲೂಕು ರೈತ ಸಂಘದ ಕಾರ್ಯದರ್ಶಿ ಸುದೇಶ ಮಯ್ಯ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ತುಳುನಾಡ ಕೃಷಿ ಕ್ರಾಂತಿ ಅಂಗವಾಗಿ ಸಜೀಪಮುನ್ನೂರು ಗ್ರಾಮದ 6 ಎಕರೆಯಲ್ಲಿ ಮಾಡಿದ ಭತ್ತದ ಹಾಗೂ ದ್ವಿದಳ ಧಾನ್ಯದ ಕೃಷಿಯನ್ನು ವೀಕ್ಷಿಸಲಾಗುವುದು.

By Suddi9

Leave a Reply

Your email address will not be published. Required fields are marked *