ಮೂಡುಬಿದಿರೆ: ಕೇಂದ್ರದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದ ಮೇಲೆ ಅಡಿಕೆಯನ್ನು ತೋಟಗಾರಿಕಾ ಬೆಳೆಯಾಗಿ ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ಅಡಿಕೆಗೆ ಹೆಚ್ಚಿನ ಬೆಲೆ ದೊರೆಯುವಂತಾಗಿದೆ. ಹಿಂದಿನ ಯು.ಪಿ.ಎ ಸರ್ಕಾರ ಅಡಿಕೆಯನ್ನೇ ನಿಷೇಧಿಸುವ ಕ್ರಮಕ್ಕೆ ಮುಂದಾಗಿ ರೈತರ ಪ್ರತಿಭಟನೆಯಿಂದ ತನ್ನ ನಿರ್ಧಾರ ಸಡಿಲಿಸಿತ್ತು. ಈಗಿನ ಕೇಂದ್ರ ಸರ್ಕಾರದ ನೀತಿಯಿಂದ ಅಡಿಕೆಯ ಬೆಲೆ ಏರುತ್ತಲೇ ಇದ್ದು ಸರ್ಕಾರದ ನೀತಿ ಅಭಿನಂದನೀಯ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ.ಕೃಷ್ಣರಾಜ ಹೆಗ್ಡೆ ಹೇಳಿದ್ದಾರೆ.

mbd_feb1_3

ವಿದೇಶಿ ಅಡಿಕೆ ಆಮದಿಗೆ ಕೆ.ಜಿಗೆ ರೂ251ರ ಬೆಲೆ, ಸುಂಕ ನಿಗದಿ ಪಡಿಸಿದ್ದ ಕೇಂದ್ರ ಆಮದು ಅಡಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ಸು ಕಂಡಿತ್ತು. ಅದರ ಪರಿಣಾಮವಾಗಿ ಈಗ ರಾಜ್ಯದಲ್ಲಿ ಅಡಿಕೆಗೆ ಕೇಜಿಗೆ ರೂ 265ರ ಬೆಲೆ ಸಿಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದ.ಕ ಸಾಂಸದ ನಳಿನ್ ಕುಮಾರ್ ಕಟೀಲ್, ಉಡುಪಿ ಸಾಂಸದೆ ಶೋಭಾ ಕರಂದ್ಲಾಜೆ, ಸಹಿತ ಎಲ್ಲ ಜನಪ್ರತಿನಿಧಿಗಳು, ಕೇಂದ್ರ ವಾಣಿಜ್ಯ ಮತ್ತು ಕೃಷಿ ಸಚಿವರಿಗೆ ಕೃಷ್ಣರಾಜ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *