ಮೂಡುಬಿದಿರೆ: ಸಂಗೀತ ಮನಸ್ಸಿಗೆ ಮುದ ನೀಡುವುದಲ್ಲದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಲವು ರೋಗಗಳ ನಿವಾರಣೆಗೆ ಮ್ಯೂಸಿಕ್ ಥೆರಪಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವುದು ಸಂಗೀತದಅನನ್ಯತೆಗೆ ಸಾಕ್ಷಿಯಾಗಿದೆಎಂದು ಮೂಡುಬಿದಿರೆ ಐಸಿಐಸಿಐ ಬ್ಯಾಂಕ್ ನ ಉಪಶಾಖಾ ಪ್ರಬಂಧಕರಾದಅಪರ್ಣಾರಾವ್ ಹೇಳಿದರು.ಕಲ್ಲಬೆಟ್ಟುಎಕ್ಸಲೆಂಟ್ ಪ.ಪೂ. ಕಾಲೇಜಿನಲ್ಲಿಜನನಿ ಮ್ಯೂಸಿಕ್ ಸಂಸ್ಥೆ ಶಿರಸಿ ಹಾಗೂ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಯೋಗದಲ್ಲಿ ನಡೆದ `ಗಾನಾಮೃತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾಲೇಜು ಆಡಳಿತ ಮಂಡಳಿ ಅಧ್ಯಕ್ûಷಯುವರಾಜಜೈನ್ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ವಿದುಷಿ ರೇಖಾ ದಿನೇಶ್ಅವರನ್ನುಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವತಿಯಿಂದಸನ್ಮಾನಿಸಲಾಯಿತು.ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಜನನಿ ಮ್ಯೂಸಿಕ್ ಸಂಸ್ಥೆಯ ದಿನೇಶ್ ಹೆಗಡೆ ಉಪಸ್ಥಿತರಿದ್ದರು.
ಉಪನ್ಯಾಸಕಿ ಪದ್ಮಪ್ರಿಯಾಕಾರ್ಯಕ್ರಮ ನಿರೂಪಿಸಿದರು, ಉಷಾ ವಂದಿಸಿದರು.ಸಭಾಕಾರ್ಯಕ್ರಮದ ಬಳಿಕ ಮೂರುಗಂಟೆಗಳ ಕಾಲ ವಿದುಷಿ ರೇಖಾ ದಿನೇಶ್ಅವರಸಂಗೀತಕಾರ್ಯಕ್ರಮ ನಡೆಯಿತು.

