ತಲಪಾಡಿ : ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಗಣನೆ ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಕ್ರೀಡಾ ಸಚಿವೆ ಅಫ್ರೀನಾ.ಎ ಜಾಗೃತಿ ಭಾಷಣ ಮಾಡಿ ನಿರಂತರ ಕಲಿಕೆ, ಸಾಧಿಸುವ ಛಲ ಹಾಗೂ ಆತ್ಮವಿಶ್ವಾಸದಿಂದ ನಿರ್ದಿಷ್ಟ ಗುರಿ ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದಳು.

1

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಮೊಹಮ್ಮದ್ ರಫೀಕ್, ಹಿರಿಯ ಶಿಕ್ಷಕಿ ಐರಿನ್, ಸಾಧನಾ, ದೈಹಿಕ ಶಿಕ್ಷಣ ಶಿಕ್ಷಕ ಭರತ್, ಚಿತ್ರಕಲಾ ಶಿಕ್ಷಕ ನವೀನ್, ಲತಾ, ವನಿತಾ, ಭವ್ಯಶ್ರೀ.ಎಂ ಮೊದಲಾದವರು ಉಪಸ್ಥಿತರಿದ್ದರು.  ವಿದ್ಯಾರ್ಥಿನಿ ಸೌಬಿಯಾ ಬಾನು ಸ್ವಾಗತಿಸಿ, ಯಾಝಿದಾ ವಂದಿಸಿದರು. ಸಂಶೀರಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *