ಮಂಗಳೂರು : ಕರ್ನಾಟಕ ಸಾಹಿತ್ಯ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿ ಹೊರತರುವ ಪ್ರಕಾಶಿತ ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೇ ವಾರ್ಷಿಕ ಮಹಾ ಸಂಭ್ರಮ ಫೆಬ್ರವರಿ 18ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಲಿದೆ. ಈ ಸಂಭ್ರಮಕ್ಕೆ ಅಂತರ್‍ರಾಷ್ಟ್ರೀಯ ಪ್ರಭಾಷಣಗಾರ ಜನಮನಗೆದ್ದ ಖ್ಯಾತ ಎ. ಎಂ. ನೌಶಾದ್ ಬಾಖವಿ ನೆಹರು ಮೈದಾನಕ್ಕೆ ಪ್ರಪ್ರಥಮವಾಗಿ ಆಗಮಿಸಲಿದ್ದು ಇದರ ಯಶಸ್ಸಿಗಾಗಿ ಸ್ಟೇಟ್‍ಬ್ಯಾಂಕ್‍ನ ಪೊಯ್ನೀರ್ ಕಾಂಪ್ಲೆಕ್ಸ್‍ನಲ್ಲಿ ಸ್ವಾಗತ ಸಮಿತಿ ಕಛೇರಿಯನ್ನು ಇಂದು ಸಮಸ್ತ ಕೇಂದ್ರ ಮುಶಾವರ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿ ಈ ಕಾರ್ಯಕ್ರಮದ ಯಶಸ್ವಿ ನಮ್ಮ ಯಶಸ್ವಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಹಾಜಿ ಝಕರಿಯ್ಯಾ ಮುಝೈನ್ ಜೋಕಟ್ಟೆ ಇವರು ಪ್ರಚಾರ ಪ್ರಯುಕ್ತ ಲಹರಿ ಮುಕ್ತ ಸಮಾಜ ಆಂದೋಲನಕ್ಕೆ ಚಾಲನೆ ನೀಡಿದರು. ಎ. ಎಚ್. ನೌಶಾದ್ ಹಾಜಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಕೆ. ಎಲ್. ಉವರ್ ದಾರಿಮಿ ಪಟ್ಟೋರಿ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಮುಸ್ತಫ ಫೈಝಿ, ಸಿದ್ಧೀಕ್ ಫೈಝಿ, ಅಬ್ದುಲ್ಲ ಹಾಜಿ ಬೆಳ್ಮ, ಹಸನ್ ಬೆಂಗರೆ, ಎನ್. ಕೆ. ಅಬೂಬಕ್ಕರ್ ಕುದ್ರೋಳಿ, ಅಸೈನಾರ್ ಮುಸ್ಲಿಯಾರ್ ಜೋಕಟ್ಟೆ, ಇಸ್ಹಾಕ್ ಫರಂಗಿಪೇಟೆ, ರವೂಫ್ ಜೋಕಟ್ಟೆ, ಜಾವಿದ್ ಸ್ಟಾರ್ ಬ್ಯಾಗ್, ಉಹಮ್ಮದ್ ಸಾದಿಕಲಿ, ಹೈದರ್ ಮೌಲವಿ ಚೊಕ್ಕಬೆಟ್ಟು, ಅಬೂಬಕ್ಕರ್ ಮೌಲವಿ ಮಿತ್ತಬೈಲ್, ಹಸನ್ ಬೆಂಗರೆ, ಸುಫಿಯಾನ್ ಮಿತ್ತಬೈಲು, ಅಫ್‍ಝಾನ್ ಮಿತ್ತಬೈಲು, ಮುಹಮ್ಮದ್ ಹಾಜಿ ಪೆರುವಾಯಿ, ನಾಸಿರ್ ಕೌಶರಿ ಬೆಂಗರೆ, ಮುಹಮ್ಮದ್ ಹಾಜಿ ಕಣ್ಣೂರು, ಜಲಾಲುದ್ದೀನ್ ಅಲುರಮಿ ಬೆಂಗರೆ, ಮುಹಿದ್ದೀನ್ ಮೌಲವಿ ತೀರ್ಥಹಳ್ಳಿ, ಸ್ವಾದಿಕ್ ಜೋಕಟ್ಟೆ, ಎಂ. ಎಸ್. ಸ್ವಾಲಿಹ್ ಮಾರ್ಗದಂಗಡಿ, ಅಸೈನಾರ್ ಮುಸ್ಲಿಯಾರ್ ಆಕರ್ಷಣ್, ಶರೀಫ್ ಮಿತ್ತಬೈಲ್, ಸ್ವಾದಿಕ್ ಕಲಾಯಿ, ಅಬ್ದುಲ್‍ರ್ರಹ್ಮಾನ್ ಕಣ್ಣೂರು, ಅಬ್ದುಲ್ ಹಮೀದ್ ಕ್ಯಾಚ್‍ಮನ್, ರಫೀಕ್ ಮೌಲವಿ ಅಜ್ಜಾವರ, ಬಶೀರ್ ಅಝ್‍ಹರಿ ಬಾಯಾರ್, ಫಾರೂಕ್ ಮಂಗಳೂರು, ಸಾಗರ್ ಮುಹಮ್ಮದ್ ಹಾಜಿ, ಖಾಸಿಂ ಹಾಜಿ ಬೆಳ್ಮ, ಇಕ್ಬಾಲ್ ಮೌಲವಿ ಮರ್ದಾಲ, ಮೊದಲಾದವರು ಉಪಸ್ಥಿತರಿದ್ದರು. ಮೊದಲಿಗೆ ಮುಸ್ತಫ ಫೈಝಿ ಸ್ವಾಗತಿಸಿ ಸಿದ್ಧೀಕ್ ಫೈಝಿ ಕರಾಯ ವಂದಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದರು.

