ಸುದ್ದಿ9ಮೂಡುಬಿದರೆ: ಕೇಂದ್ರ ಸಕರ್ಾರಕ್ಕೆ ಸಲ್ಲಿಸಲಾಗಿದ್ದ 52 ಕೋಟಿ ವೆಚ್ಚದ ಯುಜಿಡಿ ಪ್ರಸ್ತಾಪವವನ್ನು ಆಥರ್ಿಕ ವರ್ಷದ ಕೊನೆಯ ತಿಂಗಳಲ್ಲಿ ಕಳುಹಿಸಲಾಗಿರುವುದರಿಂದ ಹಾಗೂ ಸಂದರ್ಭದಲ್ಲಿ ಆಥರ್ಿಕ ಸಂಪನ್ಮೂಲ ಕ್ರೋಢಿಕರಿಸಲಾಗದ ಕಾರಣ ಕೇಂದ್ರ ಸಕರ್ಾರ ಯೋಜನೆಯನ್ನು ಹಿಂದೆ ಕಳುಹಿಸಿದೆ. ಯೋಜನೆಯನ್ನು ರಾಜ್ಯ ಸಕರ್ಾರದಿಂದ ಮಾಡುವುದಕ್ಕಾಗಿ ಪುರಸಭೆಯು ನಿರ್ಣಯ ಕೈಗೊಂಡು ಕಳುಹಿಸಿಕೊಡಬೇಕಾಗಿದೆ
ಎಂದು ಕನರ್ಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ ಮಂಡಳಿಯ ಸಹಾಯಕ ಅಭಿಯಂತರ ಸೈಮನ್ ಲೋಬೋ ಮೂಡುಬಿದರೆ ಪುರಸಭೆಯಲ್ಲಿ ಪ್ರಸ್ತಾಪಿಸಿದರು.
ಪುರಸಭಾ ಅಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭಾ ಸಭಾಭವನದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚಚರ್ೆ ನಡೆಯಿತು. ನಾಗರಕಟ್ಟೆಯಲ್ಲಿ ಶುದ್ಧೀಕರಣ ಘಟಕ ನಿಮರ್ಾಣ ಪ್ರಸ್ತಾಪ ಬಂದಾಗ ಸದಸ್ಯೆ ಪ್ರೇಮ ಸಾಲ್ಯಾನ್ ಅವರು ವಿರೋಧ ವ್ಯಕ್ತಪಡಿಸಿದ್ದರು. ಎಲ್ಲಾ ಯೋಜನೆಗಳನ್ನು ತಾವು ನಾಗರಕಟ್ಟೆಗೇನೆ ತಂದು ಹಾಕುತ್ತೀರಲ್ಲಾ ಈಗಾಗಲೇ ಬೈಪಾಸ್ಗಾಗಿ ಕೃಷಿ ಭೂಮಿಯನ್ನು ಬಿಟ್ಟುಕೊಡಲಾಗಿದೆ .ಇದೀಗ ಮತ್ತೆ ಯುಜಿಡಿ ಫ್ಲ್ಯಾಂಟ್ ಮಾಡಲು ಹೊರಟಿದ್ದೀರಲ್ಲ ಯಾರನ್ನುಕೇಳಿದ್ದೀರಿ. ಜನರನ್ನು ತಾವು ವಿಶ್ವಾಸಕ್ಕೆ ತೆಗೆದುಕೊಂಡಿದ್ದೀರಾ? ಇಲ್ಲಿ ಫ್ಲ್ಯಾಂಟ್ ಮಾಡುವುದಕ್ಕೆ ತಮ್ಮ ವಿರೋಧವಿದೆ ಪೈಪ್ ಲೈನ್ಗಳು ಬೇಕಾದರೆ ಹೋಗಲಿ ಎಂದು ಆಕ್ರೋಶದಿಂದ ನುಡಿದರು.
ಸದಸ್ಯನ ಕಟ್ಟಡಕ್ಕೆ ಡೋರ್ನಂಬರ್
ಪುರಸಭಾ ಸದಸ್ಯರೋರ್ವರು ಬಹುಮಹಡಿ ಕಟ್ಟಡವೊಂದನ್ನು ಕಾನೂನುಬಾಹಿರವಾಗಿ ನಿಮರ್ಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಸದಸ್ಯರ ಬಗ್ಗೆಯೇ ಈ ರೀತಿ ಬರುತ್ತಿರುವುದು ನಮ್ಮನ್ನು ಮುಜುಗುರಕ್ಕೆ ಒಳಪಡಿಸಿದೆ.ಆ ಕಟ್ಟಡ ಅಕ್ರಮವೆಂದು ಗೊತ್ತಿದ್ದರೂ ಪುರಸಭೆಯವರಿಗೆ ಡೋರ್ ನಂಬರ್ ನೀಡಿದ್ದೇಕೆ ಎಂದು ಲಕ್ಷಣ್ ಪೂಜಾರಿ ಪಶ್ನಿಸಿದಾಗ ಪುರಸಭೆಯಲ್ಲಿ ಕೆಲಕಾಲ ಮೌನ ಆವರಿಸಿತು.
ಹಿಂದಿನ ಮುಖ್ಯಾಧಿಕಾರಿಗಳು ಡೋರ್ ನಂಬರ್ ನೀಡಿ ಮತ್ತೆ ಡೋರ್ ರದ್ದು ಮಾಡಿದ್ದಾರೆ ಈ ಬಗ್ಗೆ ತಮಗೇನು ಗೊತ್ತಿಲ್ಲವೆಂದು ಇಂಜಿನಿಯರ್ ಪದ್ಮನಾಭ ಅವರು ಉತ್ತರಿಸಿದರು.
ಮಟನ್ ಸ್ಟಾಲ್ ವಿವಾದ: ಸಕರ್ಾರಿ ಸವಾಲ್ 2,59,047 ಇದ್ದರೆ ಅಚ್ಚರಿ ಎಂಬಂತೆ ಪೂಂಜಾಲ್ಕಟ್ಟೆಯ ಮೊಹ್ಸಿನ್ 11,00,000 ರೂಗೆ ಏಲಂ ನಿಂತರೆ ಪ್ರಾಂತ್ಯ ಲಾಡಿಯ ಲಿಂಗಪ್ಪ ಎಂಬವರು 11,01,000 ರೂ ಬಿಡ್ ಕೂಗಿ ಮಟನ್ ಟೆಂಡರ್ ಮೊತ್ತದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದಾರೆ. ನಂತರ ಲಿಂಗಪ್ಪ ಟೆಂಡರ್ ಮೊತ್ತ ದುಬಾರಿಯಾಗಿದೆ ಅದನ್ನು 4.80 ಲಕ್ಷಕ್ಕೆ ಇಳಿಸಬೇಕು ಎಂದು ಪುರಸಭೆಗೆ ಪತ್ರ ಬರೆದಿದ್ದಾರೆ. ಇನ್ನೊಬ್ಬ ಬಿಡ್ಡುದಾರ ಮೊಹ್ಸಿನ್ ಪುರಸಭೆಗೆ ಯಾವುದೇ ಪತ್ರ ನೀಡದೆ ಟೆಂಡರನ್ನು ತಿರಸ್ಕರಿಸಿದ್ದಾರೆ. ಕೊನೆಗೆ 3ಲಕ್ಷಕ್ಕೆ ನಿಂತ ಬಿಡ್ಡುದಾರ ಬಜ್ಪೆಯ ಅಹ್ಮದ್ ಅವರಿಗೆ ಮಟನ್ ಸ್ಟಾಲ್ ಗುತ್ತಿಗೆ ನೀಡುವುದಕ್ಕೆ ಪುರಸಭೆ ತೀಮರ್ಾನಕ್ಕೆ ಬಂದರೂ ಅಲ್ಲಿ ಕಾನೂನಿನ ತೊಡಕು ಎದುರಾಗುವ ಸಾಧ್ಯತೆ ಇದೆ. ಪುರಸಬೆಗೆ ಮೋಸ ಮಾಡುವುದರ ಜತೆಗೆ ನೈಜ ಬಿಡ್ಡುದಾರ ಏಲಂನಲ್ಲಿ ಪಾಲ್ಗೊಳ್ಳದಂತೆ ಮಾಡುವ ತಂತ್ರಗಾರಿಕೆವರ್ಷದಂತೆ ಈ ಬಾರಿಯೂ ನಡೆದಿದೆ. ಏಲಂಗೆ ನಿಂತ ಇವರ ಇಎಂಡಿ ಹಣವನ್ನು ಮುಟ್ಟುಗೋಲು ಹಾಕಬೇಕು ಮತ್ತು ಅವರನ್ನು ಮುಂದೆ ಏಲಂಗೆ ನಿಲ್ಲದಂತೆ ಬ್ಲ್ಯಾಕ್ ಲೀಸ್ಟ್ಗೆ ಸೇರಿಸಬೇಕು ಎಂದು ಪುರಸಭೆ ಸದಸ್ಯ ಕೊರಗಪ್ಪ ಆಗ್ರಹಿಸಿದ್ದಾರೆ.
ರೈತ ಸಂಪರ್ಕ ಕೇಂದ್ರ ನೆಲೆ : ಮೂಡುಬಿದಿರೆಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ಹಳೆಯ ಪುರಸಭಾ ಕಟ್ಟಡದಲ್ಲಿ ರೈತ ಸಂಪರ್ಕ ಕೇಂದ್ರ ಮತ್ತು ಮೂಡಾ ಕಚೇರಿ ಮಾಡಲು ಅವಕಾಶ ನೀಡಲಾಗುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.ಮೆಸ್ಕಾಂ ಸಮಸ್ಯೆಗಳ ಬಗ್ಗೆ ಸದಸ್ಯರು ಮೆಸ್ಕಾಂ ಅಧಿಕಾರಿ ಡಿ.ಆರ್ ಸತೀಶ್ ಅವರ ಗಮನಕ್ಕೆ ತಂದಾಗ ಮೆಸ್ಕಾಂ ಇಲಾಖೆಯಲ್ಲಿ ಸಿಬಂದಿಗಳ ಕೊರತೆ ಇದೆ. ತಾವು ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ತಿಳಿಸಿರುವಿರೋ ಅಲ್ಲಿ ಆದಷ್ಟು ಬೇಗನೆ ಸರಿ ಪಡಿಸುತ್ತೇವೆಂದು ಭರವಸೆಯನ್ನು ನೀಡಿದರು.
19 ರಂದು ವಿಶೇಷ ಸಭೆ:
ಪಾಕರ್ಿಂಗ್ ಸಮಸ್ಯೆ ಬಗ್ಗೆ ಪೊಲೀಸ್ ಉಪನಿರೀಕ್ಷಕ ರಮೇಶ್ ಕುಮಾರ್ ಅವರು ಸಭೆಗೆ ಮಾಹಿತಿ ನೀಡಿದಾಗ ಹನುಮಾನ್ ದೇವಸ್ಥಾನದ ಬಳಿ, ಮಸೀದಿ ರಸ್ತೆ ಬಳಿ ಹಾಗೂ ಬಸ್ ನಿಲ್ದಾಣಕ್ಕೆ ಬರುವಲ್ಲಿ ಏಕಮುಖ ರಸ್ತೆಯನ್ನು ಮಾಡಬೇಕು ಈ ಬಗ್ಗೆ ಫಲಕ ಹಾಕಬೇಕೆಂದು ಸದಸ್ಯರು ತಿಳಿಸಿದರು. ಈ ಬಗ್ಗೆ ವಿಶೇಷ ಸಭೆಯನ್ನು ಜುಲೈ 19ರಂದು ವಿಶೇಷ ಸಭೆ ನಡೆಸಲಾಗುವುದು ಎಂದು ನಿರ್ಣಯಿಸಲಾಯಿತು.
ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಎಲ್ಲಾ ವಾಡರ್್ಗಳಿಗೂ ಸಮಾನವಾಗಿ ಅನುದಾನ ಮೀಸಲಿಡುವಂತೆ ಮಹಿಳಾ ಸದಸ್ಯರಾದ ಹರಿಣಾಕ್ಷಿ ಮತ್ತು ಪ್ರೇಮಾ ಸಾಲ್ಯಾನ್ ಅಧ್ಯಕ್ಷರ ಗಮನಕ್ಕೆ ತಂದರು. ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಪ್ರಸಾದ್, ಪಿ.ಕೆ.ತೋಮಸ್ ಅನಿಲ್ ಲೋಬೋ, ರಮಣಿ ಮತ್ತು ಇತರ ಸದಸ್ಯರು ಸಭೆಯಲ್ಲಿ ಚಚರ್ೆ ನಡೆಸಿದರು. ಮುಖ್ಯಾಧಿಕಾರಿ ಶೀನ ನಾಯ್ಕ್, ಕಂದಾಯ ನಿರೀಕ್ಷಕ ಧನಂಜಯ, ಆರೋಗ್ಯ ನಿರೀಕ್ಷಕಿ ಇಂದು ಮತ್ತು ಯಶಸ್ವಿನಿ ಹಾಜರಿದ್ದರು.
…………….


