ಬಂಟ್ವಾಳ: ಮಂಗಳೂರಿನ ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಸವ್ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಶಾಲೆ, ಕಾಲೇಜು ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ದಡ್ಡಲಕಾಡು ದ.ಕ.ಜಿ.ಪಂ. ಉನ್ನತೀಕರಿಸಿದ ಶಾಲೆಯ 6ನೇ ತರಗತಿಯ ಪ್ರೀತೇಶ್ 30-35 ಕೆ.ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ವಿಜೇತ ವಿದ್ಯಾರ್ಥಿಯನ್ನು ಶಾಲಾ ಪೋಷಕರ ಸಭೆಯಲ್ಲಿ ಶಾಲಾ ಭಿವೃದ್ದಿ ಸಮಿತಿ ಹಾಗೂ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಸನ್ಮಾಸಿಲಾಯಿತು.

durga frnds

ಈ ಸಂದರ್ಭ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ, ಶಾಲಭಿವೃದ್ದಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ಪಂಜಿಕಲ್ಲು ಪ್ರಾ. ಆ.ಕೇಂದ್ರದ ವೈದ್ಯಾಧಿಕಾರಿ ವರದರಾಜ್, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷೆ ಸುಮಿತ್ರ, ಉಪಾಧ್ಯಕ್ಷೆ ಚಿತ್ರಾಕ್ಷಿ, ಶಾಲಾ ಮುಖ್ಯೋಪಾಧ್ಯಯ ಮೌರೀಸ್ ಡಿಸೋಜಾ, ಹಿರಿಯ ಆರೋಗ್ಯ ಸಹಾಯಕಿ ಲೀಲಾವತಿ ಹಾಜರಿದ್ದರು.

By suddi9

Leave a Reply

Your email address will not be published. Required fields are marked *