ಉಡುಪಿ: ಯುವಕರು ಒಂದಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದರೆ ದೇಶದ ಬೆಳವಣಿಗೆ ತ್ವರಿತಗತಿಯಲ್ಲಿ ನಡೆಯಲು ಸಾದ್ಯ ಈ ನಿಟ್ಟಿನಲ್ಲಿ ಅರ್.ಎಸ್.ಬಿ ಯುವಜನಾ ಸಭಾ ಉತ್ತಮ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಹಾಗೂ ಅರ್,ಎಸ್.ಬಿ ಸಂಘದ ಅದ್ಯಕ್ಷರಾದ ಶ್ರೀಶ ನಾಯಕ್ ಪೆರ್ಣಂಕಿಲ ಹೇಳಿದರು. ಅವರು ಜನವರಿ.22 ಆದಿತ್ಯವಾರ ಅರ್.ಎಸ್.ಬಿ ಸಭಾ ಭವನ ಮಣಿಪಾಲದಲ್ಲಿ ನಡೆದ ಅರ್.ಎಸ್.ಬಿ ಯುವಜನಾ ಸಭಾದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅದ್ಯಕ್ಷತೆಯನ್ನು ಸಭಾದ ಅದ್ಯಕ್ಷ ಪ್ರವೀಣ್ ಪ್ರಭು ಕುಕ್ಕೆಹಳ್ಳಿ ವಹಿಸಿದ್ದರು.ವೇದಿಕೆಯಲ್ಲಿ ಅರ್.ಎಸ್.ಬಿ ಸಂಘದ ನಿಕಟಪೂರ್ವ ಅದ್ಯಕ್ಷ ಮತ್ತು ಮಾಜಿ.ಜಿ.ಪಂ ಅದ್ಯಕ್ಷ ಉಪೇಂದ್ರ ನಾಯಕ್,ಬಂಟಕಲ್ಲು ದುರ್ಗಾ ಪರಮೇಶ್ವರಿ ಸಹಕಾರಿ ಸಂಘದ ಅದ್ಯಕ್ಷ ರಾಮಕೃಷ್ಣ ನಾಯಕ್,ಕಾರ್ಯದರ್ಶಿಎಳ್ಳಾರೆ ಪಾಂಡುರಂಗ ನಾಯಕ್,ಮಹಿಳಾ ವೇದಿಕೆಯ ಅದ್ಯಕ್ಷೆ ಸುಮಿತ್ರಾ ನಾಯಕ್,ಯುವಜನಸಭಾದ ಕಾರ್ಯದರ್ಶಿ ದೇವೇಂದ್ರ ನಾಯಕ್ ಮುಂತಾದವರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.ಅಲ್ಲದೆ ವಿದ್ಯಾರ್ಥಿಗಳಿಗೆ ನಡೆಯುವ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

