ಮೂಡುಬಿದಿರೆ: ರೋಟರಿ ಸಂಸ್ಥೆಯು ನಗರ ಕೇಂದ್ರಿತವಾದುದು ಎಂಬ ಅಪವಾದವಿದೆ. ಈ ಭಾವನೆಯನ್ನು ಹೋಗಲಾಡಿಸಬೇಕಾದರೆ ರೋಟರಿ ಸಂಸ್ಥೆಯು ಹಳ್ಳಿಗಳತ್ತ ಮುಖ ಮಾಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ರೋಟರಿ ಜಿಲ್ಲೆಯು ನಮ್ಮ ಹಳ್ಳಿ ಯೋಜನೆಯನ್ನು ರೂಪಿಸಿದ್ದು ಅಂತಹ ಹಳ್ಳಿಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಾರ್ಯೋನ್ಮುಖವಾಗಲಿದೆ ಎಂದು ರೋಟರಿ ಜಿಲ್ಲೆ 3181ರ ರಾಜ್ಯಪಾಲ ಡಾ. ಆರ್. ಎಸ್. ನಾಗಾರ್ಜುನ ಹೇಳಿದರು.

18-7

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‍ಟೌನ್‍ಗೆ ಮಂಗಳವಾರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಯು ದತ್ತು ಸ್ವೀಕರಿಸಿದ ನಕ್ಸಲ್ ಪೀಡಿತ ಕುತ್ಲೂರು ಗ್ರಾಮದ ಶೌಚಾಲಯ ರಹಿತ 9 ಬಡಕುಟುಂಬಗಳಿಗೆ ರೋಟರಿಯಿಂದ ನಿರ್ಮಿಸಿಕೊಟ್ಟ ಶೌಚಾಲಯಗಳ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.

ಬಡವರ ಡಾಕ್ಟರ್ ಎಂದೇ ಖ್ಯಾತಿ ಪಡೆದ ಡಾ. ಜಯಗೋಪಾಲ ತೋಳ್ಪಾಡಿ ಹಾಗೂ ಕುತ್ಲೂರು ಗ್ರಾಮದಲ್ಲಿ ರೋಟರಿಯ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಿದ ರಾಮಚಂದ್ರ ಭಟ್ ಅವರ್ನು ಸನ್ಮಾನಿಸಲಾಯಿತು. ಹಾಗೂ ಕ್ಲಬ್‍ನ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ವಿನ್ಸೆಂಟ್ ಡಿಕೋಸ್ತ ವಿವರ ನೀಡಿದರು. ಹಾಗೂ ಡಯಾಬಿಟಿಕ್ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ ಅಕ್ಷಿತಾಳ ಚಿಕಿತ್ಸೆಗೆ ಔಷಧಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಉದ್ಯಮಿ ವೀರೇಂದ್ರ ಕಿಣಿಯವರನ್ನು ಹೊಸ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು. ರಾಧಾಕೃಷ್ಣ ಬೋರ್ಕರ್ ಪರಿಚಯಿಸಿದರು. ಝೋನಲ್ ಲೆಫ್ಟಿನೆಂಟ್ ಡಾ. ಜಯಕುಮಾರ್ ರೋಟರಿ ಸಂಚಿಕೆ `ರೋಟೌನ್’ನ್ನು ಬಿಡುಗಡೆ ಮಾಡಿದರು. ರೋಟರಿ ಜಿಲ್ಲಾ ಉಪರಾಜ್ಯಪಾಲ ಸಂತೋಷ್ ಶೆಟ್ಟಿ ಮಾತನಾಡಿ ಶೌಚಮುಕ್ತ ಗ್ರಾಮ ರೋಟರಿಯ ಸಂಕಲ್ಪವಾಗಿದ್ದು ಇನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ರೋಟರಿಯೂ ಕೈಜೋಡಿಸಬೇಕು ಎಂದರು.  ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ಪ್ರಥಮ ಮಹಿಳೆ ಸುಧಾ ನಾಗಾರ್ಜುನ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕಾರ್ಯದರ್ಶಿ ಪ್ರೊ. ಹರೀಶ್ ವರದಿ ವಾಚಿಸಿದರು. ಉಮೇಶ್ ರಾವ್ ವಂದಿಸಿದರು. ಪ್ರವೀಣ್ ಸಿಕ್ವೇರಾ, ಸರಿತಾ ಹರೀಶ್ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *