ಮೂಡುಬಿದಿರೆ: ಹೆಗ್ಗೋಡಿನ ನೀನಾಸಮ್ನವರಿಂದ ಎರಡು ನಾಟಕಗಳ ಪ್ರದರ್ಶನವು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜನವರಿ 17,18ರಂದು ಸಂಜೆ 6.30ಕ್ಕೆ ಪ್ರದರ್ಶನ ಗೊಳ್ಳಲಿದೆ.
ಜನವರಿ 17 ರಂದು ಎಚ್.ಎಸ್ ಶಿವಪ್ರಕಾಶ್ ಅವರ `ಕಾಲಂದುಗೆಯ ಕಥೆ’ ಹಾಗೂ 18ರಂದು ಮಣಿಪುರದ ಕಥನಗಳನ್ನಾಧರಿಸಿದ ಅತ್ತದರಿ ಇತ್ತ ಪುಲಿ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.

