ವಿಟ್ಲ:  ವಿದ್ಯುತ್ ಇಲಾಖೆಯಲ್ಲಿ ಪದೋನ್ನತಿ ಹೊಂದಿದ ಇಬ್ಬರು ಅಧಿಕಾರಿಗಳನ್ನು ವಿಟ್ಲದ ಮೆಸ್ಕಾಂ ಉಪವಿಭಾಗದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

image

ಸಾಲೆತ್ತೂರಿನ ಮೆಸ್ಕಾಂ ಶಾಖೆಯಲ್ಲಿ ಶಾಖಾಧಿಕಾರಿಯಾಗಿದ್ದ ಜೂನಿಯರ್ ಇಂಜಿನೀಯರ್ ಸತೀಶ್ ಸಪಲ್ಯ ಸಹಾಯಕ ಇಂಜಿನಿಯರ್ ಆಗಿ ಬಂಟ್ವಾಳ ಮೆಸ್ಕಾಂ ಉಪವಿಭಾಗಕ್ಕೆ, ವಿಟ್ಲ ಕೆ ಪಿ ಟಿ ಸಿ ಎಲ್ ನಲ್ಲಿ ಇಂಜಿನಿಯರ್ ಆಗಿದ್ದ ಜಯರಾಮ ಸಹಾಯಕ ಇಂಜಿನಿಯರ್ ಆಗಿ ವಿಟ್ಲ ಮೆಸ್ಕಾಂ ಉಪವಿಭಾಗಕ್ಕೆ, ಹಾಗೂ ವಿಟ್ಲ ಮೆಸ್ಕಾಂ ಉಪವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಮಂಜೇ ಗೌಡ ಕಡೂರು ಮೆಸ್ಕಾಂ ಉಪವಿಭಾಗಕ್ಕೆ ವರ್ಗಾವಣೆ ಯಾಗಿರುತ್ತಾರೆ. ಸತೀಶ್ ಸಪಲ್ಯ ಮತ್ತು ಮಂಜೇ ಗೌಡ ಇವರನ್ನು ವಿಟ್ಲ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರವೀಣ್ ಜೋಸಿ ಯವರು ಸನ್ಮಾನಿಸಿದರು. ವಿಟ್ಲ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ಅಡ್ಯಂತಾಯ, ಶಾಖಾಧಿಕಾರಿಗಳಾದ ಆನಂದ ಉಕ್ಕುಡ, ವಸಂತ ಗೌಡ ವಿಟ್ಲ, ದಿನೇಶ್ ಮಾಣಿ, ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಪದ್ಮನಾಭ ಗೌಡ ಅಡ್ಯೇಯಿ, ಕಾರ್ಯದರ್ಶಿ ಪ್ರಸನ್ನ ಕುಮಾರ್ ಹಾಗೂ ನೌಕರ ಸಿಬ್ಬಂದಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *