ಬಂಟ್ವಾಳ : ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘ ಸಾಲೆತ್ತೂರು ವಲಯದ ಕಾರ್ಯಕರ್ತರು ಬೃಹತ್ ಸ್ವಚ್ಛತಾ ಕಾರ್ಯವನ್ನು ನಡೆಸಿದರು.

ದೇವಸ್ಥಾನದ ಒಳಾಂಗಣ-ಗರ್ಭಗುಡಿಯ ಹೊರಭಾಗ ಮತ್ತು ಹೊರಾಂಗಣವನ್ನು ಸುಮಾರು 75ಕ್ಕೂ ಹೆಚ್ಚು ಜನರು ಸೇರಿ ವಲಯ ಮೇಲ್ವಿಚಾರಕರಾದ ನವೀನ್ ಶೆಟ್ಟಿಯವರು ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುನೀತಾ ನಾಯಕ್ , ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ ನೆಲ್ಯಾಡಿ, ತಾಲೂಕು ಜನಜಾಗೃತಿ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಪಾಲ್ತಾಜೆ ದೇವಿದಾಸ್ ಶೆಟ್ಟಿ, ವಲಯಾಧ್ಯಕ್ಷ ರಂಜಿತ್, ಸಿ.ಎಚ್.ಸೀತಾರಾಮ ಶೆಟ್ಟಿ ಹಾಗೂ ಸೇವಾ ಪ್ರತಿನಿಧಿ ಗಳು ಭಾಗವಹಿಸಿದ್ದರು. ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ 1.00 ರ ವರೆಗೆ ಶ್ರಮದಾನ ನಡೆಸಿ ದೇವಸ್ಥಾನದ ಸಂಪೂರ್ಣ ಸ್ವಚ್ಛತೆಯನ್ನು ಮಾಡಿದರು. ನಮ್ಮ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.

