ಮೂಡುಬಿದಿರೆ: ಐಎಲ್ಎಂ ಫೇಶಿಯಲ್ ಪರ್ಫಾರ್ಮೆನ್ಸ್ ಸಾಲ್ವಿಂಗ್ ಸಿಸ್ಟಂ ಎಂಬ ತಂತ್ರಜ್ಞಾನದ ವಿಯಾಸಕ್ಕಾಗಿ ಮೂಡುಬಿದಿರೆ ಕಡಂದಲೆ ಮೂಲದ ಕಿರಣ್ ಭಟ್ಗೆ ಆಸ್ಕರ್ ತಂತ್ರಜ್ಞಾನ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅಕಾಡೆಮಿ ಆಫ್ ಮೋಶನ್ ಪಿಕ್ಟರ್ ಆಟ್ಸ್ ಎಂಡ್ ಸೈನ್ಸಸ್ ಜ.4ರಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಕಿರಣ್ ಭಟ್ ಮೂಡುಬಿದಿರೆ ಸಮೀಪದ ಕಡಂದಲೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಬಳಿಯ, ಸಧ್ಯ ಕೊಯಮುತ್ತೂರಿನಲ್ಲಿ ನೆಲೆಸಿರುವ ಶ್ರೀನಿವಾಸ್ ಭಟ್-ಜಯಶ್ರೀ ದಂಪತಿಯ ಪುತ್ರ.

