ಬಂಟ್ವಾಳ: ತಾಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಿಕ್ಷಕ-ರಕ್ಷಕ ಸಂಘದ ಸಭೆಯಲ್ಲಿ ಬಂಟ್ವಾಳ ಎಲ್ಲೈಸಿ ಶಾಖೆ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಅವರು ‘ವಿಮಾ ಶಾಲೆ’ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಮುಖ್ಯಶಿಕ್ಷಕ ಅಶೋಕ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ ಪೂಜಾರಿ, ಮಾಜಿ ಅಧ್ಯಕ್ಷ ಇನಾಸ್ ರಾಡ್ರಿಗಸ್, ಸದಸ್ಯರಾದ ಹೀಶ ಶೆಟ್ಟಿ, ಉಮೇಶ ಆಚಾರ್ಯ, ಪ್ರಮೀಳಾ, ಶಿಕ್ಷಕ ಹೇಮಣ್ಣ ನಿಂಬಣ್ಣನವರ್ ಮತ್ತಿತರರು ಇದ್ದರು.

