ಮುಂಬಯಿ: ನೆನಪು ಸಂಸ್ಕೃತಿಯ ಒಂದು ಭಾಗ. ಇದರ ಕೂಡ್ರೀಕರಣವೇ ಚರಿತ್ರೆಗಳ ಮಹಾ ಸಂಪುಟ. ಈ ವರೆಗೆ ಇದರಲ್ಲಿ ಸೇರಿರುವುದಕ್ಕಿಂತ ಸೇರದೇ ಇರುವ ಸಂಗತಿಗಳೇ ಆಗಾಧ. ನೆನಪನ್ನು ಸ್ಮರಿಸುವುದು ಮತ್ತು ಅದರಲ್ಲಿರುವ ಧೀಮಂತತೆಗೆ ನಮಿಸುವುದು ಮತ್ತು ಅದರ ತೆವಳುಗಳ ಬಗ್ಗೆ ಎಚ್ಚರ ವಹಿಸುವುದು ಮಾನವಧರ್ಮ. ನಾವು ನಮ್ಮ ಬದುಕಿನ ನೋವನ್ನು ಮರೆಯಬಹುದು. ಆದರೆ ನೆನಪನ್ನು ಅಳಿಸಿ ಹಾಕುವುದಕ್ಕಾಗುವುದಿಲ್ಲ. ನಮ್ಮ ಸಹಜ ಪ್ರವೃತ್ತಿ, ಅದರಿಂದ ಅರಳಿದ ಸಂಸ್ಕೃತಿ ಮತ್ತು ವಿಕೃತಿಗಳು ನವ ನವ ನೋಟಕ್ಕೆ ಗ್ರಾಸವಾದರೆನೆ ಅದು ನಾಗರೀಕತೆಯ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಬಲ್ಲದು. ಈ ಹಿನ್ನೆಲೆಯಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಸಂಶೋಧನಾ ಮತ್ತು ಪ್ರಕಟಣಾ ವಿಭಾಗವು ಆಯೋಜಿಸಿದ ನವನೋಟದ ನೆನಹಿನ ನಮನ ಒಂದು ವಿಶಿಷ್ಟ ಬಗೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಆಗಿದ್ದ ಲೇಖಕಿ ಸಂಘಟಕಿ ಸುಮಿತ್ರಾ ಬಿ.ಗುಜರನ್ ತಿಳಿಸಿದರು.

goregoan

ನಮ್ಮ ನಮ್ಮ ಜೀವನದಲ್ಲಿ ನೆನಪಿಗೆ ತುಂಬಾ ಮಹತ್ವವಿದೆ. ನಮ್ಮ ಆಸಕ್ತಿಗಳು ನಮ್ಮ ಪರಿಸರದ ವಿವೇಕದ ವಿಕಾಸಕ್ಕೆ ಪೂರಕವಾಗಬೇಕು. ನಮ್ಮ ಇತಿಹಾಸದಲ್ಲಿ ಇರುವುದು, ಇಂದು ಇತಿಹಾಸದ ಭಾಗವಾಗಲಿರುವುದು ಎಲ್ಲವೂ ನಮ್ಮ ಅನುಭವ ಕಥನವನ್ನು ವಿಸ್ತರಿಸುವ ಆಕರಗಳು. ಇದರ ಸ್ವರೂಪ ದರ್ಶನ್ ಈ ನೆನಹಿನ ನಮನದಲ್ಲಿ ನಡೆಯಲಿ ಎಂದು ಆಶಿಸುವೆ ಎಂದರು.

ವೀರ ವನಿತೆ ಕಿತ್ತೂರು ಚೆನ್ನಮ್ಮ ಸ್ವಾತಂತ್ರ ಇಲ್ಲವೆ ಸ್ವರ್ಗ ಎನ್ನುತ್ತಾ ಬ್ರಿಟಿಷರ ಮುಂದೆ ಸಡ್ಡು ಹೊಡೆದು ನಿಂತವಳು. ಅವಳ ಹರ ಹರ ಮಹಾದೇವ್ ಎಂಬ ರಣ ಮಂತ್ರ ಒಮ್ಮೆ ವೈರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದೇ ಅಲ್ಲದೆ ಅವರಿಗೆ ಸರಿಯಾದ ಪಾಠವನ್ನೂ ಕಲಿಸಿತ್ತು. ಆದರೆ ಅತಿ ಉದಾರತೆ ನಮಗೆ ಮುಳುವಾಗುವುದು ಸಹಜ. ಸೋತವರನ್ನು ಕರುಣೆಯಿಂದ ಜೀವದಾನ ನೀಡಿದ ರಾಣಿ ಚೆನ್ನಮ್ಮ ಕೊನೆಗೂ ಮೋಸದ ಚಾಲಕ್ಕೆ ಬಲಿಯಾಗಿ ಕಾರಾಗ್ರಹ ಸೇರಿ ಅಸು ನೀಗಿದ್ದು ಒಂದು ಮಹಾ ದುರಂತ ಎಂದು ವೀರ ನಾರಿ ಕಿತ್ತೂರು ಚೆನ್ನಮ್ಮರ ಬಗ್ಗೆ ಸಂಘಟಕಿ ರಜನಿ ವಿ. ಪೈ ಅವರು ನುಡಿದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾಶೀಲ ವಿದ್ಯಾರ್ಥಿ ಎಚ್. ಪರಸಪ್ಪ ಅವರು; ಸ್ವಾತಂತ್ರ್ಯ ಸೇನಾನಿ ಭಾಯಿ ದಾಮೋದರ ಬಂಗೇರ ಅವರ ಬಗ್ಗೆ ಮಾತನಾಡುತ್ತಾ, ಮಹತ್ಮಾ ಗಾಂಧಿಜಿ ಅವರಿಂದಲೇ ಭಾಯಿ ದಾಮೋದರ್ ಬಂಗೇರ ಮಹಾನ್ ಹೈ ಎಂದು ಕರೆಸಿಕೊಂಡ ಹೆಗ್ಗಳಿಕೆ ಅವರದ್ದು. ಸ್ವಾತಂತ್ರ್ಯ ಹೋರಾಟಗಾ ರ, ವಡಲಾ ಉಪ್ಪಿನ ಸತ್ಯಾಗ್ರಹದ ಸರ್ವಾಧಿಕಾರಿ ಮಾನ್ಯತೆಯ ನಾಯಕ, ಪತ್ರಕರ್ತ, ಬಹುಭಾಷಾ ಪಂಡಿತ, ಸಾಹಿತಿ ದಾಮೋದರ ಬಂಗೇರರ ಕೃತಿಗಳು ಈಗ ನಮಗೆ ದೊರೆಕಿಲ್ಲ. ಇದು ವಿಷಾದನೀಯ. ಮುಂಬಯಿಯ ಹೈಕೋರ್ಟ್ ಮೇಲೆ ತಿರಂಗಿ ಧ್ವಜವನ್ನು ಹಾರಿಸಿದ ಈ ಧೀಮಂತ; ಕಾರ್ಕಳದ ಪರ್ಪಲೆ ಪರ್ವತದಲ್ಲಿ ಅನಾಥಮಕ್ಕಳಿಗೆ ಅನಾಥಾಶ್ರಮ ತೆರೆದು ವಿಧ್ಯೆ ಕಲಿಸಿದವರು. ಆದರೆ ಇವರ ಹೆಣ ಮಾತ್ರ ಮೂರುದಿನ ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದೆ ಅನಾಥವಾಗಿ ಬಿದ್ದದ್ದು ನಮ್ಮ ನಡುವೆ ಘಟಿಸಿದ ಒಂದು ಮಹಾ ದುರಂತ. ಹೀಗಾಗಬಾರದಿತ್ತು ಎಂದು ಹೃದಯಂಗಮವಾಗಿ ತನ್ನ ಉಪನ್ಯಾಸದಲ್ಲಿ ಚಿತ್ರಿಸಿದರು.

ಆನಪ್ರೀಯತೆಯ ತುತ್ತ ತುದಿಯಲ್ಲಿರುವಾಗ ಮಿನುಗುತಾರೆ ಕಲ್ಪನಾ ಮರೆಯಾದದ್ದು ಒಂದು ದುರಂತ. ಈಕೆ 70ಕ್ಕೂ ಹೆಚ್ಚು ಕನ್ನಡ, ತುಳು, ತಮಿಳು, ಮಲಿಯಾಳಿ ಚಿತ್ರಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆಗಳಿಸಿದ ನಟಿ. ಆದರೆ ಬಣ್ಣದ ಜಗತ್ತಿನಲ್ಲಿ ತನ್ನ ಚಿನ್ನದಂತಹ ಬದುಕನ್ನು ಕೈಯಾರೆ ಹಾಳು ಮಾಡಿಕೊಂಡಳು. ಚಲನಚಿತ್ರ ಲೋಕದಲ್ಲಿ ತನ್ನದೇ ವಿಶಿಷ್ಟವಾದ ಸೌದರ್ಯ ಪ್ರಜ್ಞೆಯಿಂದ ಹೊಸ ಟ್ರೆಂಡ್ ನಿರ್ಮಿಸಿದ ಕಲಾವಿದೆ ಎಂದು ಮಿನುಗುತಾರೆ ಕಲ್ಪನಾ ಅವರ ಬಗ್ಗೆ ಮಾತನಾಡುತ್ತಾ ಚುರುಕು ಚುಟುಕಿನ ಸಂಘಟಕಿ ವಸುಧಾ ಆರ್.ನಾಯಕ್ ವಿವರಿಸಿದರು.

ಕನ್ನಡ ಚಿತ್ರರಂಗವೇ ಏಕೆ ಭಾರತೀಯ ಚಿಂತ್ರರಂಗದಲ್ಲಿ ಸದಾ ಸ್ಮರಿಸಬೇಕಾದ ಇಬ್ಬರು ಚಿರ ಯೌವನ ಮಹಾ ನಟರಿದ್ದಾರೆ. ಅವರಿಬ್ಬರೂ ತಮ್ಮ ಕಠಶ್ರೀ ಮತ್ತು ಮಾತಿನ ಶುದ್ಧತೆಯಿಂದ ಜನ ಮನ ಗೆದ್ದ ಕಲಾವಿದರು. ಅವರಲ್ಲಿ ಒಬ್ಬರು ಹಿಂದಿ ಚಲಚಿತ್ರದ ಅಮಿತಾ ಬಚ್ಚನ್ ಆದ್ರೆ ಇನ್ನೊಬ್ಬರು ಕನ್ನಡ ಚಿತ್ರರಂಗದ ವರನಟ ರಾಜ್‍ಕುಮಾರ್. ತನ್ನ ಬಧುಕಿನಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾದಿ ಕಾಣಿಸಿಕೊಂಡು ರಾಜ್‍ಕುಮಾರ್ ಸುಮಾರು 60ಕ್ಕೂ ಹೆಚ್ಚು ನಾಯಕ ನಟಿಯರೊಡನೆ ನಾಯಕರಾಗಿ ನೀಡಿದ ಅಧ್ಬುತ ಅಭಿನಯಕ್ಕೆ ಸಾಟಿಯಾದದ್ದು ಇನ್ನೊಂದಿಲ್ಲ. ನಟನೆ, ಗಾಯನ, ನೃತ್ಯದಲ್ಲೂ ಸರಿಮಿಗಿಲೆನ್ನುವ ರಾಜ್‍ಕುಮಾರ್ ಒಬ್ಬ ಸಮರ್ಥ ಯೋಗಭ್ಯಾಸಿ. ತನ್ನ ಶರೀರವನ್ನೇ ನಾಗರ ಹಾವಿನಂತೆ ಕುಣಿಸಬಲ್ಲ ನಟ ಶೇಖರ ಎಂದು ಸಮಾಜ ಸೇವಕಿ ಮೀರಾಕೃಷ್ಣ ಉದಾಹರಣೆ ಸಹಿತ ತಿಳಿಸಿದರು.ಈ ಕಾರ್ಯಕ್ರಮವನ್ನು ಗ್ರಂಥಾಯನದ ಸದಸ್ಯೆ ಮೋಹಿನಿ ಪೂಜಾರಿ ಸಂಚಾಲನೆಗೈದರು.

By Suddi9

Leave a Reply

Your email address will not be published. Required fields are marked *