ಬಿಸಿರೋಡ್: ಪದ್ಮನಾಭ ನಗರದಲ್ಲಿ ಜರಗಿದ 4ನೇ ವರ್ಷದ ಯಕ್ಷಗಾನ ಬಯಲಾಟ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಶಕ್ತಿನಗರ ಕೇಶವ ರಾವ್ ಇವರನ್ನು “ತುಡರ್ ಯಕ್ಷ ಮಿತ್ರೆರ್ “ ಇವರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಮಂಗಳೂರು, ಮಂಗಳೂರಿನ ಸೀನಿಯರ್ ಎಂಜಿನಿಯರ್, ಎಂಆರ್‍ಪಿಎಲ್, ಸದಾಶಿವ ಡಿ.ತುಂಬೆ, ಪದ್ಮಶ್ರೀ ಎಲೆಕ್ಟ್ರಿಕಲ್ಸ್ ಪದ್ಮನಾಭ ಮಯ್ಯ ಬಿ.ಸಿ.ರೋಡ್, ಸ್ವರ್ಣ ಜ್ಯುವೆಲ್ಲರ್ಸ್ ರೂಪೇಶ್ ಆಚಾರ್ಯ ಮೆಲ್ಕಾರ್, ಪದ್ಮ ಕಾಂಪ್ಲೆಕ್ಸ್ ಮಾಲಕ ಸತೀಶ್ ರಾವ್ ಬಿಸಿ.ರೋಡ್, ಬಿ.ಸಿ.ರೋಡ್ ತುಡಾರ್ ಯಕ್ಷ ಮಿತ್ರ ಇದರ ಅಧ್ಯಕ್ಷ ನಾರಾಯಣ ಸಿ ಪೆರ್ನೆ, ಗೌರಾವಾಧ್ಯಕ್ಷ ಟಿ. ಶೇಷಪ್ಪ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ನೇಸರ ವಳವೂರು, ಉಪಾಧ್ಯಕ್ಷ ರಮೇಶ್ ಕೆ., ಮತ್ತು ತಿಮ್ಮಪ್ಪ ಕೆ., ಕೋಶಾಧಿಕಾರಿ ಸದಾನಂದ ಎಮ್ ಶೆಟ್ಟಿ, ಉಪ ಕಾರ್ಯದರ್ಶಿ ಜಯರಾಮ ಎನ್., ದಿವಾಕರ ದಾಸ್ ಕಾವಳಕಟ್ಟೆ, ಉಮೇಶ್ ಆರ್.ಮೂಲ್ಯ, ತಿಲಕ್ ರಾಜ್, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಂತರ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಇವರ ವತಿಯಿಂದ ಪ್ರೊ| ಪವನ್ ಕಿರಣಕೆರೆ ವಿರಚಿತ “ಕ್ಷಮಯಾ ಧರಿತ್ರಿ” ಎಂಬ ಕಥಾಭಾಗವನ್ನು ಯಕ್ಷಗಾನ ಬಯಲಾಟದ ಮುಖಾಂತರ ಪ್ರದರ್ಶಿಸಲಾಯಿತು.
