ಸುದ್ದಿ9 ಕೈಕಂಬ : ಅಡ್ಢೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಜು.15ರಂದು ಮಂಗಳವಾರ ಸಾಯಂಕಾಲ 5.55ಕ್ಕೆ ನಿರ್ಮಾಣ ಗೊಂಡಿರುವ ನೂತನ ಆರೊಢದಲ್ಲಿ ಶ್ರೀ ನಾಗಶಿಲಾ ಪ್ರತಿಷ್ಠಾಪನೆಯನ್ನು ತಂತ್ರಿಗಳಾದ ಪೊಳಲಿ ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರ ನೇತೃತ್ವದಲ್ಲಿ ನೆರವೇರುವುದು.
ಜು. 14ರಂದು ಸೋಮವಾರ ಸಾಯಂಕಾಲ 5.30 ಕ್ಕೆ ಪ್ರಾರ್ಥನೆ ,ಸ್ಥಳಶುದ್ಧಿ , ವಾಸ್ತು ಪೂಜೆ, ರಕ್ಷೊಘ್ನ ಹೋಮ,ಪ್ರಾಸಾದ ಬಲಿ, ಬಿಂಭಾಧಿವಾಸ
ಜು.15ರಂದು ಮಂಗಳವಾರ ಬೆಳಗ್ಗೆ 5 ಕ್ಕೆ ಪ್ರತಿಷ್ಠಾಹೋಮ ಬೆಳಗ್ಗೆ 5.55 ಕ್ಕೆ ಮಿಥುನ ಲಗ್ನದಲ್ಲಿ ನಾಗಶಿಲಾ ರಕ್ತೇಶ್ವರೀ ಪ್ರತಿಷ್ಠೆ,ಗಣಹೋಮ, ಪ್ರಾಯಶ್ಚಿತಪವಮಾನ ಹೋಮ, ಕಲಾಶಾಧಿವಾಸ,ಅಧಿವಾಸ ಹೋಮ ಆಶ್ಲೇಷಾ ಬಲಿ. ಬೆಳಗ್ಗೆ 11 ಕ್ಕೆ ಕಲಾಶಾಭಿಷೇಕ ಮಧ್ಯಾಹ್ನ 12 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ. ಮಧ್ಯಾಹ್ನ 1 ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಪ್ರಕಟನೆ ತಿಳಿಸಿದೆ

