ಮುಂಬಯಿ: ಸಯಾನ್ ಪೂರ್ವದಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಸಂಸ್ಥೆಯ ಯೋಜನೆ ಭವ್ಯ ಗೋಕುಲ ಭವನದ ಪೂರ್ವಸಿದ್ಧತಾ ಕಾರ್ಯಕ್ರಮದಲ್ಲಿ ಗೋಕುಲ ಶ್ರೀ ಕೃಷ್ಣ ಮಂದಿರದಲ್ಲಿ ಸುಮಾರು ಮೂರು ದಶಕಗಳ ಅವಿರತ ಸೇವೆ ಸಲ್ಲಿಸಿದ ಮಂದಿರದ ಅನುವಂಶಿಕ ಅರ್ಚಕ ಮುಚ್ಚೂರು ಹರಿ ಭಟ್ ಮತ್ತು ಮಾಧವಿ ಭಟ್ ದಂಪತಿಯನ್ನು ಉಭಯ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.

sanmana

ಕಳೆದ ಮೂರು ದಶಕಗಳಿಂದ ಶ್ರೀ ದೇವರ ಪೂಜಾ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ಇದೀಗ ಸೇವಾ ನಿವೃತ್ತಿಗೊಂಡ ಸಂದರ್ಭದಲ್ಲಿ ಅಸೋಸಿಯೇಶನ್‍ನ ಹಾಗೂ ಜಿಪಿಟಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಹಾಗೂ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ, ಮಾನಪತ್ರಗಳನ್ನಿತ್ತು ಸನ್ಮಾನಿಸಿ ಗೌರವಿಸಿ ಅಭಿವಂದಿಸಿದರು.

ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಕಾರ್ಯದರ್ಶಿ ಮತ್ತು ಟ್ರಸ್ಟೀ ಎ.ಎಸ್ ರಾವ್, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಖಜಾಂಚಿ ಕೃಷ್ಣ ಆಚಾರ್ಯ, ವಿಶ್ವಸ್ಥ ಸದಸ್ಯ ಬಿ.ರಮಾನಂದ ರಾವ್, ಬಿಎಸ್‍ಕೆಬಿಎ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಪಿ.ಉಮೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೈಲಿನಿ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಹರಿಭಟ್ ಸೇವೆ ಪ್ರಶಂಸಿಸಿದರು.

By suddi9

Leave a Reply

Your email address will not be published. Required fields are marked *