ಬಂಟ್ವಾಳ: ತುಂಬೆ ಡ್ಯಾಂಗೆ ಸಂಬಂಧಿಸಿ ಇದುವರೆಗೆ ಜರಗಿದ ಸಭೆ ನಿರ್ಣಯಗಳು ಜಾರಿಯಾಗಿರುವುದಿಲ್ಲ. ಆದ್ದರಿಂದ ಸಂತ್ರಸ್ತರನ್ನು ಕತ್ತಲಲ್ಲಿಟ್ಟು ಏಕ ಪಕ್ಷೀಯವಾಗಿ ಸಾದಕ ಬಾದಕ ಪರಾಮರ್ಶ ಮಾಡಿ ಸಮಸ್ಯೆ ಪರಹರಿಸುವುದು ಪ್ರಜಾಸತ್ತಾತ್ಮಕ ವಿರೋಧಿ ನೀತಿಯಾಗಿದೆ. ಜ.8 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯನ್ನು ರೈತರ ಸಮ್ಮುಖ ಬಂಟ್ವಾಳದಲ್ಲಿ ನಡೆಸಿ ರೈತರನ್ನು ವಿಶ್ವಾಸಕ್ಕೆ ಪಡೆದು ಪರಹಾರೋಪಾಯ ಕಂಡುಕೊಳ್ಳಬೇಕಾಗಿ ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಅವರು ವಿನಂತಿಸಿದ್ದಾರೆ.

