ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ವಿಟ್ಲ ಬಿ ಒಕ್ಕೂಟದ ಪದ್ಮಶ್ರೀ ಸ್ವ-ಸಹಾಯ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವವು ತಂಡದ ಸದಸ್ಯೆ ಲಲಿತಾ ರವರ ಅಧ್ಯಕ್ಷತೆಯಲ್ಲಿ, ವಲಯ ಮೇಲ್ವಿಚಾರಕರ ಮಾರ್ಗದರ್ಶನ ದೊಂದಿಗೆ ನಡೆಯಿತು. ಸೇವಾ ಪ್ರತಿನಿಧಿ ಸರಿತ, ಒಕ್ಕೂಟದ ಉಪಾಧ್ಯಕ್ಷೆ ವಿಮಲ ಉಪಸ್ಥಿತರಿದ್ದರು. ಶ್ಯಾಮಲಾ ಸ್ವಾಗತಿಸಿದರು. ಕಮಲಾ ವರದಿ ವಾಚಿಸಿದರು. ಲಕ್ಷ್ಮೀ ವಂದಿಸಿದರು. ಚೈತ್ರ ಕಾರ್ಯಕ್ರಮ ನಿರೂಪಿಸಿದರು.

