ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾವನ ಕ್ಷೇತ್ರ ಉಡುಪಿಯ ಶಂಕರಪುರದ ಸುಸಂಸ್ಕೃತ ಮನೆತನ ಪಾಂಗ್ಳಾದಲ್ಲಿ ಜನಿಸಿದ ಇವರು ಬಿ.ಎ ಪದವೀಧರರಾಗಿ ಬದುಕನ್ನರಸಿ ಮುಂಬಯಿಗೆ ಆಗಮಿಸಿ ಸದ್ಯ ತುಳು, ಕನ್ನಡಿಗ, ಕೊಂಕಣಿ, ಮುಸ್ಲಿಂ, ಮರಾಠಿ, ಗುಜರಾತಿಯರ ಮನೆಮಾತಾಗಿರುವ ಭಾರತ ದೇಶದಲ್ಲೇ ಪ್ರತಿಷ್ಠಿತ ಪ್ರಿಂಟ್ಹೌಸ್ ಪ್ರಸಿದ್ಧಿಯ `ಪ್ರಿಂಟಾನಿಯಾ ಆಫ್ಸೆಟ್ ಪ್ರೈವೇಟ್ ಲಿಮಿಟೆಡ್’ ನ ಆಡಳಿತ ನಿರ್ದೇಶಕ ಆಲ್ಬರ್ಟ್ ವಿಲ್ಫ್ರೇಡ್ ಡಿ’ಸೋಜಾ ಅವರ ಜೀವನದ ಷಷ್ಟ್ಯಾಬ್ಧಿ ಸಂಭ್ರಮಾಚರಣೆ ಅದ್ದೂರಿಯಾಗಿ ಆಚರಿಸಲ್ಪಟ್ಟಿತು.

ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಪಾಲ್ಘರ್ ಅಲ್ಲಿನ ವೆವೂರುನಲ್ಲಿ ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ನ ಮೂಲಕ ಸೈಂಟ್ ಜೋನ್ ಕಾಲೇಜ್ ಆಫ್ ಇಂಜಿನೀಯರಿಂಗ್ ಎಂಡ್ ಟೆಕ್ನಾಲಜಿ (ಎಸ್ಜೆಸಿಇಟಿ), ಸೈಂಟ್ ಜೋನ್ ಪಾಲಿಟೆಕ್ನಿಕ್, ಸೈಂಟ್ ಜೋನ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ ಎಂಡ್ ರಿಸರ್ಚ್ (ಎಸ್ಜೆಐಪಿ ಆರ್), ಸೈಂಟ್ ಜೋನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಂಡ್ ರಿಸರ್ಚ್ (ಎಸ್ಜೆಐಎಂಆರ್), ಸೈಂಟ್ ಜೋನ್ ಕಾಲೇಜ್ ಆಫ್ ಹ್ಯೂಮ್ಯಾನಿಟೀಸ್ ಎಂಡ್ ಸಾಯನ್ಸಸ್ (ಎಸ್ಜೆಸಿಹೆಚ್ಎಸ್), ಸೈಂಟ್ ಜೋನ್ ಇಂಟರ್ನೇಶನಲ್ ಸ್ಕೂಲ್ (ಎಸ್ಜೆಐಎಸ್), ಸೈಂಟ್ ಜೋನ್ ಜೂನಿಯರ್ ಕಾಲೇಜ್ (ಎಸ್ಜೆಜೆಸಿ), ಆಲ್ಡೇಲ್ ಟ್ಯುಟೋರಿಯಲ್ ಅಕಾಡೆಮಿ ಇತ್ಯಾದಿ ಶೈಕ್ಷಣಿಕ ಸಂಸ್ಥೆಗಳ ಸ್ಥಾಪಕ ರೂವಾರಿ ಆಲ್ಬರ್ಟ್ ಡಬ್ಲ್ಯು.ಡಿ’ಸೋಜಾ ಅವರ ಪಾಲ್ಘರ್ ಅಲ್ಲಿನ ಸೈಂಟ್ ಜೋನ್ ಕಾಲೇಜು ಸಮೂಹದ ಕ್ಯಾಂಪಸ್ನಲ್ಲಿ ಡಿ’ಸೋಜಾರ ಷಷ್ಠ್ಯಾಬ್ಧಿ ಆಚರಣೆಯೊಂದಿಗೆ ನೂತನ ವರ್ಷಾಚರಣೆಯನ್ನು ವಿಜೃಂಭನೆಯೊಂದಿಗೆ ಸಂಭ್ರಮಿಸಲಾಯಿತು.

ವಿವಿಧ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು, ವಿದ್ಯಾರ್ಥಿಗಳು ಒಗ್ಗೂಡಿ ಆಯೋಜಿಸಿದ್ದ ಸಮಾರಂಭದಲ್ಲಿ ಆಲ್ಬರ್ಟ್ ಡಬ್ಲ್ಯು.ಡಿ’ಸೋಜಾ ತಮ್ಮ ಪರಿವಾರವನ್ನೊಳಗೊಂಡು ಕೇಕ್ ಕತ್ತರಿಸಿ ಅರ್ವತ್ತರ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಡಿ’ಸೋಜಾರ ತಾಯಿ ಎಲಿಜಬೆತ್ ಡಿ’ಸೋಜಾ, ಪತ್ನಿ ಎಲ್ವಿನಾ ಎ.ಡಿ’ಸೋಜಾ, ಪುತ್ರಿ ಎಲಾಯ್ನ್ ಎ.ಡಿ’ಸೋಜಾ, ಪುತ್ರ ಆಲ್ಡ್ರೀಜ್ ಎ.ಡಿ’ಸೋಜಾ, ಅಳಿಯ ರೂಬೆನ್ ಬುಥೇಲೊ, ಮೊಮ್ಮಗಳು ಬೇಬಿ ಇವಾ ರೂಬೆನ್, ಸಹೋದರ ಸ್ಟೀವನ್ ಡಿ’ಸೋಜಾ, ರೆ| ಫಾ| ವಲೇರಿಯನ್ ಡಿ’ಸೋಜಾ ಮಂಗಳೂರು ಆಲ್ಡೇಲ್ ಪರಿವಾರ ಸೇರಿದಂತೆ ನೂರಾರು ಸ್ಥಾನೀಯ ಅನೇಕ ಜನಪ್ರತಿನಿಧಿ, ಅಭಿಮಾನಿ, ಹಿತೈಷಿಗಳು ಉಪಸ್ಥಿತರಿದ್ದು ಆಲ್ಬರ್ಟ್ ಡಿ’ಸೋಜಾ ಅವರಿಗೆ ಶುಭಾರೈಸಿದರು.


