ಬಂಟ್ವಾಳ: 18.12.2016 ರಂದು ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ನೂತನ ಡ್ಯಾಂ ನಲ್ಲಿ ನೀರು ಸಂಗ್ರಹಿಸಲಾಗಿದ್ದು 19.12.2016 ರಂದು ಗಂಗಾಪೂಜೆ ನಿರ್ಮಿಸಿ 5ವಿೂ. ನೀರು ಸಂಗ್ರಹಿಸಲಾಗಿದೆ ಎಂದು ಅಧಿಕೃತವಾಗಿ ಪೋಷಿಸಲಾಗಿದ್ದು ನಂತರ ಪಾಣೆಮಂಗಳೂರು ಬಂಟ್ವಾಳ ಸಂಪರ್ಕ ರಸ್ತೆ ಬಳಿ ಸ್ಥಾಪಿಸಲಾದ ಜಲಮಟ್ಟದಲ್ಲಿ ಅಳತೆ ಸ್ಥಾವರ ಕಂಚಿಗಾರ ಕೂಟ್ಲು- ಚಿಕ್ಕಯ ಮಠ ಪ್ರದೇಶದಲ್ಲಿರುವ ರೈತರು ಕಳೆದ 3 ದಿನಗಳಲ್ಲಿ ನದಿ ನೀರು ಮಟ್ಟ 5.20 ವಿೂ ಇದುದ್ದನ್ನು ಪ್ರತ್ಯಕ್ಷ ಕಂಡು ಕೊಂಡಿದ್ದಾರೆ. 5 ಮೀಟರ್‍ಗೆ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರಜಾಸತ್ತಾತ್ಮಕ ವಿರೋಧಿ ನೀತಿಯನ್ನು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷರು ಎಂ.ಸುಬ್ರಹ್ಮಣ್ಯ ಭಟ್ ಖಂಡಿಸಿದ್ದು, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸಂಬಂಧಿತರಿಗೆ ಖಡಕ್ ಆದೇಶ ನೀಡುವಂತೆ ಮನವಿ ಮಾಡಿರುತ್ತಾರೆ.

dam-1

ಪ್ರಸ್ತುತ ಮಾನವ ನಿಯಂತ್ರನ ವ್ಯವಸ್ಥೆ ಜಾರಿಯಲ್ಲಿದ್ದು ನೀರಿನ ಮಟ್ಟ ಕಾಯ್ದುಕೊಳ್ಳಲು ಕಂಪ್ಯೂಟರೀಕೃತ ವ್ಯವಸ್ಥೆ ಅಳವಡಿಸಿದರೆ ಈ ಸಮಸ್ಯೆ ಪರಿಹಾರವಾಗಲಿದ್ದು ಸರಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ವ್ಯವಸ್ಥಿತವಾಗಿ ಸಜೀಪಮುನ್ನೂರು ಗ್ರಾಮ ಅದ್ರುಕ್ಕು ಶಿವರಾಮ ಬಾಸ್ರೀತ್ತಾಯರ ಜಮೀನು ಮಲಾಯಿಬೆಟ್ಟಿನ ರಫೀಕ್ ಬಶೀರ್ ಅವರ ಭತ್ತದ ಕೃಷಿ ಮುಳುಗಡೆಯಾಗಿದ್ದು, ಬಿ.ಮೂಡ ಗ್ರಾಮದ ತಿಮ್ಮಪ್ಪ ರೈ ಜಮೀನು ಶಾಶ್ವತ ಮುಳುಗಡೆಯಾಗಿದ್ದು ಅವರ ಉಳಿಕೆ ಜಮೀನಿನ ಭತ್ತದ ಕೃಷಿಗೆ ತೊಂದರೆಯಾಗಿದ್ದು ಇವರೆಲ್ಲಾ ಮ.ನ.ಪಾ ಪ್ರಕಟಿಸಿದ ಸಂತ್ರಸ್ತ ರೈತರ ಪಟ್ಟಿಯಲ್ಲಿರದ ರೈತರಾಗಿದ್ದು ಇವರಿಗೆ ಸಕಾಲದಲ್ಲಿ ಪರಿಹಾರ ಒದಗಿಸುವಂತೆ ವಿನಂತಿಸಿದ್ದಾರೆ.

26.12.2016 ರಂದು ಮ.ನ.ಪಾ ಆಯುಕ್ತ ಮೊಹಮ್ಮದ್ ನಝೀರ್ ಮತ್ತು ತುಂಬೆ ಡ್ಯಾಂ ಸಂತ್ರಪ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಅವರ ನೇರ ಚರ್ಚೆಯ ನೇರ ಪ್ರಸಾರ ಗಿ4 ಚಾನೆಲ್‍ನಲ್ಲಿ ಜರಗಿದ ಸಂದರ್ಭ ಮ.ನ.ಪಾ ಆಯಕ್ತರು ಈಗಾಗಲೇ 5+1 ವರತೆ ಪ್ರದೇಶ ಸೇರಿಸಿ 18 ಎಕ್ರೆಗೆ ಪರಿಹಾರ ನೀಡಲಿದ್ದೇವೆ, ಈ 18 ಎಕ್ರೆ ವರತೆ ಪ್ರದೇಶವೇ ಆಗಿರುತ್ತದೆ ಎಂದು ತಿಳಿಸಿದ್ದು ಅದಕ್ಕೆ ಪ್ರತಿಕ್ರಿಯಿಸಿದ ಎಂ ಸುಬ್ರಹ್ಮಣ್ಯ ಭಟ್ ಕೇಂದ್ರ ಜಲ ಆಯೋಗ ನಿರ್ದೇಶನದಂತೆ ಸರಿಯಾದ ರೀತಿಯಲ್ಲಿ ಸರ್ವೆ ಆಗಿದ್ದರೆ 180 ಎಕ್ರೆಗೂ ಅಧಿಕ ವರತೆ ಪ್ರದೇಶಕ್ಕೆ ನ್ಯಾಯೋಚಿತ ಪರಿಹಾರ ನೀಡಬೇಕಾಗಿರುತ್ತದೆ. ಮ.ನ.ಪಾ ಈ ನಿಟ್ಟಿನಲ್ಲಿ ರೈತರಿಗೆ ವಂಚನೆ ಮಾಡಿದ್ದು ಎಲ್ಲಾ ಸಂತ್ರಸ್ತ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದರು.

By Suddi9

Leave a Reply

Your email address will not be published. Required fields are marked *