ಉಡುಪಿ: ಮಾನವ ಜನ್ಮ ಅತ್ಯಂತ ಬೆಲೆಬಾಳುವಂತದ್ದು ಅದನ್ನು ಅರಿತು ಸಮಾಜದಲ್ಲಿ ಉತ್ತಮವಾಗಿ ಬದುಕಿದರೆ ನಮ್ಮ ಜನ್ಮ ಸಾರ್ಥಕವಾದಂತೆ, ಎಷ್ಟೋ ಮಂದಿ ಅಪರಾಧ ಮಾಡಿ ಇಂದು ಸಮಾಜಘಾತುಕ ಕಲಸಮಾಡುತ್ತಿದ್ದಾರೆ ಅವರಿಗೆ ಮಾರ್ಗದರ್ಶನ ಕೊರತೆಯಿದೆ ಎಂದು ಖ್ಯಾತ ಹರಿಕಥಾದಾಸರು ಮತ್ತು ಜೇಸಿ ರಾಜ್ಯ ತರಬೇತುದಾರರಾದ ಬಿ.ಸಿ ರಾವ್ ಶಿವಪುರ ಹೇಳಿದರು.

udupi

ಅವರು ಮಲ್ಪೆಕೊಡವೂರು ರೋಟರಿ ಕ್ಲಬ್ ವತಿಯಿಂದ ಅಂಜಾರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಮನ ಪರಿವರ್ತನೆ ಕಾರ್ಯಾಗಾರದಲ್ಲಿ ಮಾತನಾಡಿದರು.

ಮನಸ್ಸನ್ನು ಹತೋಟಿಯಲ್ಲಿಡ ಬೇಕಾದದ್ದು ಅತ್ಯಂತ ಅವಶ್ಯವಾಗಿದೆ. ಮನಸ್ಸು ಚಂಚಲತೆಯಿಂದ ಅನೇಕ ಜನ ಸಮಾಜದಲ್ಲಿ ತಪ್ಪು ಮಾಡಿ ಮುಖ್ಯವಾಹಿನಿಯಿಂದ ದೂರವಾಗಿದ್ದಾರೆ. ಅವರಿಗೆ ಮಾಹಿತಿ ಮಾರ್ಗದರ್ಶನ ನೀಡಿಅವರನ್ನು ಸಮಾಜದೊಂದಿಗೆ ಸೇರಿಸುವ ಕೆಲಸವಾಗಬೇಕಾಗಿದೆ. ನಾವು ಯಾರು ಕೂಡ ಯಾವುದೇ ಅರ್ಜಿ ಸಲ್ಲಿಸದೇ ಸಮಾಜಕ್ಕೆ ಬಂದಿದ್ದೇವೆ ಹೋಗುವಾಗ ಕೂಡ ಯಾವುದೇ ಅರ್ಜಿ ಹಾಕುದಿಲ್ಲ ಹೀಗಾಗಿ ಇರುವ ಈ ಜೀವನದಲ್ಲಿ ಉತ್ತಮ ಬದುಕು ನಮ್ಮದಾಗಬೇಕುಎಂದರು. ಪ್ರೀತಿಯು ಗೆಲ್ಲುತ್ತದೆ ಹೊರತು ಹಿಂಸೆಯಲ್ಲ ನಮ್ಮ ಅನೇಕ ಮಹಾತ್ಮರು ಈ ಬಗ್ಗೆ ಹೇಳಿದ್ದರು ಎಂದು ಮಾರ್ಮಿಕವಾಗಿ ನುಡಿದರು.

ಈ ಸಂದರ್ಭದಲ್ಲಿ ಅವರನ್ನುರೋಟರಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ರೋಟರಿ ಅದ್ಯಕ್ಷ ಪ್ರಭಾತ್‍ ಕೋಟ್ಯಾನ್ ವಹಿಸಿದ್ದರು. ಅತಿಥಿಗಳಾಗಿ ರೋಟರಿಯ ಜಿಲ್ಲಾ ಉಪಗವರ್ನರ್ ಮೋಹನದಾಸ ಪೈ,ಜೈಲಿನ ಸುಪರಿಟೆಂಡ್‍ ಈರಣ್ಣ, ಜೈಲರ್ ಶ್ರೀಧರ ಪ್ರಭು ಮಾತನಾಡಿದರು.ಈ ಸಂದರ್ಭದಲ್ಲಿ ವಿಚಾರಣಾಧಿನರಿಗೆ ದಿನನಿತ್ಯ ಬಳಸುವ ವಸ್ತುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಉಪಗವರ್ನರ್ ಮಹೇಶ ಕುಮಾರ್,ಅನಿಲ್ ಶೆಟ್ಟಿ,ಕೆ.ಟಿಪ್ರಸಾದ್,ವಿಜಯ ಬಂಗೇರ,ರಮೇಶ,ಚಂದ್ರಕಾಂತ್ ಶೆಟ್ಟಿಗಾರ್,ಕಾರ್ಯದರ್ಶಿ ಸುಂದರ್ ಪೂಜಾರಿ,ರಾಘವೇಂದ್ರ ಪ್ರಭು ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *