ಉಡುಪಿ: ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ಇದರ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಡಿಸೆಂಬರ್.24 ರಿಂದ ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಡಿಸೆಂಬರ್.24 ರಂದು ಕಾರ್ಯಕ್ರಮವನ್ನು ಉಡುಪಿ ತಾ.ಪಂ ಸದಸ್ಯ ಲಕ್ಷಿನಾರಾಯಣ ಪ್ರಭು ಉದ್ಘಾಟಿಸಲಿದ್ದು, ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ರಾಧಿಕಾ ಪೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತಾಧಿಕಾರಿ ದಯಾನಂದ ಶೆಟ್ಟಿ, ಕೊಡೆಬೆಟ್ಟು ಗ್ರಾ.ಪಂ ಅದ್ಯಕ್ಷ ರಾಜು ಪೂಜಾರಿ,ಶಾಲಾಭಿವೃಧಿ ಸಮಿತಿ ಅದ್ಯಕ್ಷ ದೇವೇಂದ್ರ ನಾಯಕ್,ಮುಖ್ಯ ಶಿಕ್ಷಕಿ ಗೌರಿ,ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಭಾಗವಹಿಸಲಿರುವರು.ಡಿಸೆಂಬರ 30 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಅನೇಕ ರೀತಿಯ ಸಮಾಜಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಯೋಜನಾಧಿಕಾರಿ ಪ್ರಕಾಶ್ ಭಟ್ ತಿಳಿಸಿದ್ದಾರೆ.

