ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಶ್ರೀ ಕೃಷ್ಣನಗರ ದಲ್ಲಿ ಕಲಾಶ್ರೀ ಮಿತ್ರಬಳಗ, ಮಹಿಳಾ ಬಳಗ ಮತ್ತು ಮಾತೃಭೂಮಿ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಡಿ.18ರಂದು ಭಾನುವಾರ “ಸಾಮೂಹಿಕ ಸತ್ಯನಾರಾಯಣ ಪೂಜೆ” ಯು ಪೆರಾರ ನಾಗರಾಜ್ ಭಟ್ ಅವರ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ , ಮಾತೃಭೂಮಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ದೇವಸ್ಯೆ, ನಿರ್ಧೇಶಕ ವೆಂಕಟೇಶ ನಾವುಡ, ಮುರಳೀಧರ ಶೆಟ್ಟಿ ಎಡಪದವು, ರಾಜೇಶ್ ಹೆಗ್ಡೆ, ತಾ.ಪಂ ಸದಸ್ಯ ಯಶವಂತ ಪೊಳಲಿ, ಕರಿಂಯಂಗಳ ಗ್ರಾ. ಪಂ.ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ ರಾವ್, ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ, ಬಾಲಕೃಷ್ಣ ಮಾಸ್ಟರ್, ಗ್ರಾ. ಪಂ ಸದಸ್ಯರಾದ ಸುರೇಶ್ ಮಣಿಕಂಠಪುರ. ಕಿಶೋರ್ ಪಲ್ಲಿಪಾಡಿ, ಲೋಕೇಶ್ ಪೊಳಲಿ ,ಶಕುಂತಲಾ ಸತೀಶ್ , ದೇವ್ ದಾಸ್ ಆಯೆರೆಮಾರ್ ಮತ್ತಿತರರು ಉಪಸ್ಥಿತರಿದ್ದರು.





