ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು, ಬೆರಳಚ್ಚುಗಾರರ 526 ಹುದ್ದೆಗಳ ಭರ್ತಿಗೆ ನ.16ರಂದು ಅರ್ಜಿ ಆಹ್ವಾನಿಸಿದ್ದ ಕರ್ನಾಟಕ ಲೋಕಸೇವಾ ಆಯೋಗ, ಇದೀಗ ಹೆಚ್ಚುವರಿಯಾಗಿ 276 ಹುದ್ದೆ ಸೇರ್ಪಡೆ ಮಾಡಿದೆ. ಒಟ್ಟು 802 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸೇರ್ಪಡೆ ಹುದ್ದೆಗಳ ಪೈಕಿ ಶೀಘ್ರಲಿಪಿಗಾರರು-85(ಹೈ.ಕ-06) ಬೆರಳಚ್ಚುಗಾರರು-191(ಹೈ.ಕ-43) ಹುದ್ದೆಗಳಿವೆ.
ಹೆಚ್ಚಿನ ವಿವರಗಳಿಗೆ ಸಹಾಯವಾಣಿ: 080-30574957/ 080-30574901,
ವೆಬ್ಸೈಟ್:www.kpsc.kar.nic.in ಸಂಪರ್ಕಿಸಿ.

