ಮುಂಬಯಿ: ಈಗ ನಗರವನ್ನೊಮ್ಮೆ ಸುತ್ತು ಹಾಕಿದರೆ, ಹಲವಾರು ಮನೆಗಳು ಕ್ರಿಸ್ಮಸ್ ಆಚರಣೆಗೆ ಸಿದ್ಧವಾಗಿ ನಿಂತಿರುವುದನ್ನು ನೋಡಬಹುದು. ಏಕತೆ ಮತ್ತು ಒಡನಾಟದ ಬಾಂಧವ್ಯದೊಂದಿಗೆ ಒಬ್ಬ ಸೇವಕರಾಗಿ ಓರ್ವ ನಮ್ರತೆಯ ಮೂರ್ತಿಯಾಗಿ ಜನಿಸಿದ `ಯೇಸು ಕ್ರಿಸ್ತರ’ ಸಂದೇಶ ಸಾರುವ ಕ್ರಿಸ್ಮಸ್ ಸಂಭ್ರಮ ಮತ್ತೆ ಬಂದೊದಗಿದ್ದು, `ಯೇಸು ಕ್ರಿಸ್ತರ ಜನ್ಮಸ್ಥಳ ಗೋದಲಿ‘ಯನ್ನು ಚಿತ್ರಿಸುವ, ರೂಪಿಸುವ ಪರಿಕರಗಳನ್ನು ಖರೀದಿಸುವಲ್ಲಿ ನಗರದ ಜನತೆ ಸಜ್ಜಾಗಿದ್ದಾರೆ.

cr-1

c-3

cr-2

cr-3

cr-4

cr-5

c-14

c-2

c-4

c-6

c-8

c-9

c-10

c-12

c-13

chritsmus-1

ಕ್ರಿಸ್ಮಸ್ ಹಬ್ಬಾಚರಣೆಯ ಉತ್ಸಾಹಕ್ಕಾಗಿ ಸುಂದರವಾದ ಮತ್ತು ಸೊಗಸಾದ ಕ್ರಿಸ್ಮಸ್ ಅಲಂಕಾರಗಳು ನಗರದಾದ್ಯಂತ ಕಂಗೊಳಿಸುತ್ತಿದ್ದು ಕ್ರೈಸ್ತರು ಎಲ್ಲಾ ವಿಜೃಂಭಣೆಯ ಕ್ರಿಸ್ಮಸ್ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಕ್ರಿಸ್ಮಸ್ ಸಂದೇಶ ಸಾರುವ ವರ್ಣರಂಜಿತ ಸಂಭ್ರಮಕ್ಕಾಗಿ ಏಂಜೆಲ್, ಕ್ರಿಸ್ಮಸ್‍ಟ್ರೀ, ಸಾಂತಕ್ಲಾಸ್ ಮತ್ತು ನಕ್ಷತ್ರ ಇತ್ಯಾದಿಗಳನ್ನು ಆಯ್ದುಕೊಳ್ಳಲು ಸನ್ನದ್ಧರಾಗಿದ್ದಾರೆ. ಮುಂಬಯಿ ಫೋರ್ಟ್ (ವಿಟಿ) ಅಲ್ಲಿನ ಕ್ರಾಫರ್ಡ್ ಮಾರ್ಕೆಟ್‍ನಲ್ಲಿ ಇಂದಿಲ್ಲಿ ಕ್ರಿಸ್ಮಸ್ ವಸ್ತುಗಳನ್ನು ಆಯ್ದು ಕೊಳ್ಳಲು ಜನಸ್ತೋಮವೇ ನೆರೆದಿತ್ತು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

By Suddi9

Leave a Reply

Your email address will not be published. Required fields are marked *