ಬಂಟ್ವಾಳ : ಉಕ್ಕುಡ ಸಮೀಪ ರಸ್ತೆಯ ಬದಿಗೆ ಸರಿದ ಲಾರಿಯ ಚಕ್ರ ಹೂತು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಬುಧವಾರ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗುತ್ತಿದ್ದರೂ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಪಾರ್ಮರ್ ಗಳು ಬಿದ್ದು ಬಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷಧರ್ಶಿಗಳು ತಿಳಿಸಿದ್ದಾರೆ.
