ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ 49ನೇ ವಾರದ ಕಾರ್ಯಕ್ರಮದಡಿ ಡಿ. 01 ಗುರುವಾರದಂದು ಬಿ.ಕಸಬಾ ಗ್ರಾಮದ ಕೆಳಗಿನಪೇಟೆ ಪರಿಸರದಲ್ಲಿ ಪುರಸಭಾ ಸದಸ್ಯರಾದ ಮುನೀಶ್ ಅಹಮದ್ ಆಲಿ ಇವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ನಂತರ ಕೆಳಗಿನಪೇಟೆ ಪರಿಸರದ 172 ಮನೆಗಳಿಗೆ ತ್ಯಾಜ್ಯ ಸಂಗ್ರಹಣಾ ಬಕೆಟ್‍ಗಳನ್ನು ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ವಿತರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಯರಾದ ಮೆಟಿಂಡ ಡಿ’ಸೋಜಾ, ಆಡಳಿತ ಮಂಡಳಿ ಸದಸ್ಯರು, ಪುರಸಭಾ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಮತ್ತು ಸಿಬ್ಬಂದಿಯವರು, ಬಂಟ್ವಾಳ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಅರಬಿ, ಸ್ಥಳೀಯ ಗಣ್ಯರಾದ, ಅಬ್ದುಲ್ ಲತೀಫ್ ನೀಮ, ಅಬ್ದುಲ್ ಲತೀಫ್ ಚೆಮ್ಮೋನು ಕಾರ್ಯಕ್ರಮದಲ್ಲಿ ಭಾಗವಹಿಸಿದರು.




