ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ತಾ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ , ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ , ಬಂಟ್ವಾಳ ಪತ್ರಕರ್ತರ ಸಂಘ, ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಸಜಿಪ ಮೂಡ ಗ್ರಾಮ ಪಂ. ಸಭಾಂಗಣದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀ ಶರಾದ ಆರ್.ಮಹೇಶ್ ಉದ್ಘಾಟಿಸಿದರು.

sajipa

ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಗಣೇಶಾನಂದ ಸೋಮಯಾಜಿ ಆಸ್ತಿ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.

ಸಜಿಪಮೂಡ ಗ್ರಾ,.ಪಂ.ಅಧ್ಯಕ್ಷ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ , ಸಹಾಯಕ ಸರಕಾರಿ ವಕೀಲ ಸತೀಶ್ ಕುಮಾರ್ ಶಿವಗಿರಿ, ಎಸ್.ಕೆ.ಪಿ.ಎ. ವಲಯ ಪ್ರತಿನಿಧಿ ರಾಜರತ್ನ, ವಕೀಲರು ಗಳಾದ ಅಶ್ವನಿ ಕುಮಾರ್ ರೈ, ಮೋಹನ್ ಪ್ರಭು, ಶ್ರೀಧರ ಪೈ, ರಾಜೇಶ್ ಬೊಳ್ಳುಕಲ್ಲು, ಭಾನುಶಂಕರ್ ಬನ್ನಿಂತಾಯ , ನಿರ್ಮಲ, ವಿನೋದ, ಸತೀಶ್ ಬಿ., ಪಂ.ಸದಸ್ಯರಾದ ರಮೇಶ್ ಪಣೋಲಿಬೈಲ್ , ವಿಶ್ವನಾಥ ಬೆಳ್ಚಾಡ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ರಮೇಶ್ ಉಪಾಧ್ಯಾಯ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್ ಸ್ವಾಗತಿಸಿದರು. ಗಿರೀಶ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *