ವಿಟ್ಲ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ತಾ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ , ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ , ಬಂಟ್ವಾಳ ಪತ್ರಕರ್ತರ ಸಂಘ, ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಮೊಹಿಯುದ್ದೀನ್ ಇಬ್ರಾಹಿಂ ಜಮಾತ್ ಕಮಿಟಿ ಕಂಬಳಬೆಟ್ಟು ವಿಟ್ಲದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಸಂಚಾರಿ ನ್ಯಾಯಾಲಯದ ಅಭಿಯಾನದ ಕಾನೂನು ಅರಿವು ಕಾರ್ಯಕ್ರಮವನ್ನು ಗೌ/ಹಿರಿಯ ಸಿವಿಲ್ ನ್ಯಾಯಾಧೀ ಶರಾದ ಚಂದ್ರಶೇಖರ ಯು. ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಜಯರಾಮ್ ರೈ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಧರ್ಮಗುರು ಹಾಜಿ ಇಬ್ರಾಹಿಂ ಮದನಿ ಅಧ್ಯಕ್ಷತೆ ವಹಿಸಿದ್ದರು.

ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರಕಾರಿ ವಕೀಲ ಸತೀಶ್ ಕುಮಾರ್ ಶಿವಗಿರಿ, ಸಹಾಯಕ ಧರ್ಮಗುರುಗಳಾದ ಮಹಮ್ಮದ್ ಹನೀಫ್ ಸಖಾಫಿ, ಅಧ್ಯಕ್ಷ ಎ.ಕೆ.ಖಾದರ್, ಉಪಾಧ್ಯಕ್ಷ ಹಾಜಿ ಮೊಹಿದ್ದೀನ್ ಶಾಫಿ, ಎಸ್.ಕೆ.ಪಿ.ಎ.ವಲಯ ಉಪಾಧ್ಯಕ್ಷ ಗೋಪಾಲ್ ಕೃಷ್ಣ ಸಿ., ವಿಟ್ಲ ಎಎಸ್ಐ ಕಿಟ್ಟು ಮೂಲ್ಯ , ವಕೀಲರುಗಳಾದ ಎ.ಕೆ.ರಾವ್, ಕೃಷ್ಣ, ರಾಮಣ್ಣ ಗೌಡ, ಡಿ.ಬಿ.ಅಬ್ದುಲ್ ಖಾದರ್, ನಿರ್ಮಲ, ಸುನೀತಾ ಪಾರ್ವತಿ ಶೋಭ, ಸತೀಶ್ , ದೀಪಿಕಾ ಉಪಸ್ಥಿತರಿದ್ದರು. ನ್ಯಾಯವಾದಿ ವೀರೇಂದ್ರ ಜೈನ್ ಸ್ವಾಗತಿಸಿದರು. ನ್ಯಾಯವಾದಿ ಉಮೇಶ್ ಕುಮಾರ್ ವಂದಿಸಿ ಪ್ರಧಾನ ಕಾರ್ಯದರ್ಶಿ ರಾಜಾರಾಮ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
