ವಿಟ್ಲ: ಮಂಚಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಇವರ ಉಪಸ್ಥಿತಿಯಲ್ಲಿ ಮಕ್ಕಳ ಗ್ರಾಮ ಸಭೆ ನ.24.ರಂದು ನಡೆಸಲಾಯಿತು.

12

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಾನಂದ್, ಕಾಣೆಯಾದ ಮಕ್ಕಳ ಬ್ಯೂರೋದ ಸಂಯೋಜಕರಾದ ವಾಣಿ ಮಾಹಿತಿಯನ್ನು ನೀಡಿದರು. ಮೇಲ್ವಿಚಾರಕಿ ಗುಣವತಿ ಮಕ್ಕಳ ಹಕ್ಕುಗಳ ಬಗ್ಗೆ, ಕರ್ತವ್ಯದ ಬಗ್ಗೆ ತಿಳಿಸಿದರು. ವಿದ್ಯಾರ್ಥಿನಿ ಶಿಲ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷ ಮೋಹನದಾಸ ಶೆಟ್ಟಿ, ಸದಸ್ಯರಾದ ಪುಷ್ಪಾ ಕಾಮತ್, ಭಾಗೀರತಿ, ಜ್ಯೋತಿ ಪ್ರಭು, ಸೀತಮ್ಮ, ಸುಮ, ಪ್ರತಿಮ, ಸುಮತಿ, ಶಾಲಾ ಮುಖ್ಯೋಪಾಧ್ಯಾಯರುಗಳು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಯಾ ಕುಮಾರಿ ಎಲ್ಲರನ್ನು ಸ್ವಾಗತಿಸಿ ಕಾರ್ಯದರ್ಶಿ ರಮೇಶ್ ವಂದನಾರ್ಪಣೆಗೈದರು.

By suddi9

Leave a Reply

Your email address will not be published. Required fields are marked *