ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ತಾ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ , ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ , ಬಂಟ್ವಾಳ ಪತ್ರಕರ್ತರ ಸಂಘ, ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಸುಜೀರ್ ಸರಕಾರಿ ಪ್ರಾಢಶಾಲೆಯಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಸಂಚಾರಿ ನ್ಯಾಯಾಲಯದ ಅಭಿಯಾನದ ಕಾನೂನು ಅರಿವು ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ಬಿ.ವಿಶೆಣೈ ಉದ್ಘಾಟಿಸಿದರು.

sujiru-2

ಸಂಪನ್ಮೂಲ ವ್ಯಕ್ತಿ ವಕೀಲರಾದ ಅರುಣ್ ರೋ ಶನ್ ಡಿಸೋಜ ಮೋಟಾರು ವಾಹನ ಕಾಯಿದೆ ಮತ್ತು ಪರಿಸರದ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು.

sujiru

ವೇದಿಕೆಯಲ್ಲಿ ಸಹಾಯಕ ಸರಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ, ಸಹಾಯಕ ಸರಕಾರಿ ಅಭಿಯೋಜಕರಾದ ಎಂ.ಎಸ್.ಆಲಿ, ಎಸ್.ಕೆ.ಪಿ.ಎ ಅಧ್ಯಕ್ಷ ಸುಕುಮಾರ್ ವಕೀಲರು ಗಳಾದ ಅಶ್ವನಿ ಕುಮಾರ್ ರೈ, ಎ.ಕೆ.ರಾವ್ ಉಪಸ್ಥಿತರಿದ್ದರು. ವಕೀಲರಾದ ಆಶಾ ಪ್ರಸಾದ್ ರೈ ಪ್ರಸ್ತಾವನೆಗೈದರು. ಶಿಕ್ಷಕಿ ಶಶಿಮಂಗಲ ವೈ ಸ್ವಾಗತಿಸಿದರು. ಶಿಕ್ಷಕ ಜಯಪ್ರಕಾಶ್ ವಂದಿಸಿ ಶಿಕ್ಷಕ ಮಹಮ್ಮದ್ ಬಿ. ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *