ಕೊಚ್ಚಿ: ಶಬರಿಮಲೆಯ ದೇಗುಲ ಇನ್ನು ಮುಂದೆ ಶಬರಿಮಲೆ “ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ” ಎಂಬ ಹೊಸ ಹೆಸರಿನಿಂದ ಕರೆಯಲ್ಪಡಲಿದೆ. ಈ ಬಗ್ಗೆ ದೇಗುಲದ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಸೋಮವಾರ ಮಹತ್ವದ ನಿರ್ಣಯ ಕೈಗೊಂಡಿದೆ. ಅ.5ರಂದು ನಡೆದಿದ್ದ ದೇವಸ್ವಂ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.
ದೇವಸ್ವಂ ಮಂಡಳಿ ವ್ಯಾಪ್ತಿಯಲ್ಲಿ ಧರ್ಮಶಾಸ್ತಾ ಎಂಬ ಹೆಸರಿನ ದೇಗುಲಗಳು ಹಲವಾರು ಇವೆ. ಆದರೆ ಶಬರಿಮಲೆಯಲ್ಲಿ ಮಾತ್ರ ಅಯ್ಯಪ್ಪ ಸ್ವಾಮಿ ಇರುತ್ತಾರೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ವಂ ಮಂಡಳಿ ತಿಳಿಸಿದೆ.

