ಬಂಟ್ವಾಳ: ಶಾಲೆಗಳ ಉನ್ನತಿಯು ಸಮುದಾಯದ ಉನ್ನತಿಗೆ ಕಾರಣವಾಗುತ್ತದೆ. ಶಾಲೆಯ ಏಳಿಗೆಯಿಂದ ಕೇವಲ ವಿದ್ಯಾರ್ಥಿಗಳ ಏಳಿಗೆ ಮಾತ್ರವಲ್ಲ ಅವರ ಪೋಷಕರ ಗೌರವವೂ ಹೆಚ್ಚಾಗುತ್ತದೆ. ಶುಚಿತ್ವವು ಮನೆಯಂಗಳದಿಂದ ಪ್ರಾರಂಭವಾಗಬೇಕು, ಶಾಲಾಪರಿಸರದಲ್ಲಿ ಪೋಷಕರ ಹಾಗೂ ಶಿಕ್ಷಕರ ಸಂಬಂಧ ಉತ್ತಮವಾಗಿದ್ದಾಗ ಅಭಿವೃದ್ಧಿಯು ನಿರಂತರವಾಗಿರುತ್ತದೆ. ಕೃಷಿ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಾಗ ಜೀವನೋಪಾಯದ ವಿದ್ಯೆಯು ಚಟುವಟಿಕೆಯ ಮೂಲಕ ಪಡೆದಾಗ ಗಟ್ಟಿಯಾಗಿ ಬೆಳೆಯಲು ಸಾಧ್ಯವೆಂದು ಬಂ.ತಾ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ನೋಣಯ್ಯ ನಾಯ್ಕ್‍ರವರು ಮಜಿ ವೀರಕಂಭ ಶಾಲೆಯಲ್ಲಿನ ತರಕಾರಿಯ ಪ್ರಥಮ ಕೊಯ್ಲ ಹಾಗೂ ಶಿಕ್ಷಕ – ರಕ್ಷಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

schl-2

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಗೀತಾ ಚಂದ್ರಶೇಖರ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಜೀವ ಮೂಲ್ಯ, ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ ಜನಾರ್ಧನ, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ದಿನೇಶ ಹಾಗೂ ಪದಾಧಿಕಾರಿಗಳು, ಸ್ವಸ್ತಿಕ್ ಫ್ರೆಂಡ್ಸ್‍ನ ಪದಾಧಿಕಾರಿ ಪ್ರವೀಣ್, ಕೇಸರಿ ಫ್ರೆಂಡ್ಸ್ ಸದಸ್ಯರಾದ ಜಗದೀಶ್, ಎಸ್.ಕೆ.ಪಿ.ಎ.ನ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರ, ಹಾಗೂ ಪೋಷಕರು ಭಾಗವಹಿಸಿದರು.

school

ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಶಕುಂತಳಾ ಧನ್ಯವಾದವಿತ್ತರು. ಸಂಗೀತ ಶರ್ಮ ಕಾರ್ಯಕ್ರ ನಿರ್ವಹಿಸಿದರು. ಸಿಸಿಲಿಯಾ ಹಾಗೂ ಜ್ಯೋತಿ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *