ಕಾನ್ಪುರ: ಭಾನುವಾರ ನಸುಕಿನ ಜಾವದಲ್ಲಿ ಇಂದೋರ್-ಪಾಟ್ನಾ ಎಕ್ಸ್’ಪ್ರೆಸ್ ಕಾನ್ಪುರ ಬಳಿ ಹಳಿ ತಪ್ಪಿತ್ತು. ಈ ದುರ್ಘಟನೆಯಲ್ಲಿ ಮಡಿದವರ ಸಂಖ್ಯೆ 145ಕ್ಕೆ ಏರಿದೆ. ಇದರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡದ ಕಾರ್ಯಾಚರಣೆಯೂ ಕೂಡಾ ಮುಕ್ತಾಯಗೊಂಡಿದೆ. 250 ಸದಸ್ಯರ ವಿಪತ್ತು ನಿರ್ವಹಣೆ ತಂಡವು ಮೃತದೇಹ ಹಾಗೂ ಗಾಯಗೊಂಡವರ ರಕ್ಷಣೆಗಾಗಿ ಸತತ 30 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದೆ.

kanpur_train_tragedy_1

PKVerma_Accident112016

ಪತ್ತೆಯಾದ ಮೃತದೇಹಗಳ ಪೈಕಿ 123 ಮಂದಿಯ ಗುರುತು ಪತ್ತೆಯಾಗಿದೆ, ಹಾಗೂ 110 ಮಂದಿಯ ಮೃತರ ದೇಹವನ್ನು ಈಗಾಗಲೇ ಕುಟುಂಬದವರಿಗೆ ವಶಕ್ಕೆ ನೀಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾ-ನಿರೀಕ್ಷಿಕ ಜಾವೇದ್ ಆಹಮದ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರೈಲು ಸಚಿವ ಸುರೇಶ್ ಪ್ರಭು ತನಿಖೆಗೆ ಆದೇಶಿಸಿದ್ದಾರೆ.

By suddi9

Leave a Reply

Your email address will not be published. Required fields are marked *