ಬಂಟ್ವಾಳ: ಸರಪಾಡಿ ಗ್ರಾಮದ ಮಣಿ ನಾಲ್ಕೂರು, ಕಡವಿನ ಬಾಗಿಲು, ಅರ್ಮುಡಿ, ಪೆರ್ಲ ಬಿಯಾಪಾದೆ, ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆಗೆ ಬಂಟ್ವಾಳ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮಾರ್ಗದರ್ಶನದಂತೆ ಬಂಟ್ವಾಳ ಹೋಬಳಿ ಕಂದಾಯ ಇಲಾಖೆಯ ಅಧಿಕಾರಿಗಳು ನ.18ರಂದು ಬಂಟ್ವಾಳ ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ ದಿಢೀರ್ ದಾಳಿ ನಡೆಸಿದ್ದು ಎರಡು ಗ್ಯಾಸ್ ಸಿಲಿಂಡರ್, ಸ್ಟವ್, ಹಾರೆ, ಬುಟ್ಟಿ, ಇನ್ನಿತರ ಸಲಕರಣೆಗಳನ್ನು ದಾಳಿ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಯಿತು.

bantwala

ಕಾರ್ಯಾಚರಣೆ ವೇಳೆ ನದಿ ತಟದಲ್ಲಿ ಮರಳುಗಾರಿಕೆಯವರು ತಂಗಲು ಹಾಕಿದ ಡೇರೆಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.

b-2

ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ಕಂದಾಯ ನಿರೀಕ್ಷಕರಾದ ನವೀನ್, ಗ್ರಾಮ ಕರಣಿಕರಾದ ಜನಾರ್ಧನ್, ಪ್ರವೀಣ್, ರಾಜು ಲಮಾನಿ, ಅನಿಲ್, ನಿಂಗಪ್ಪ, ಸಿಬ್ಬಂದಿಗಳಾದ ವೆಂಕಟರಮಣ, ಲೋಕನಾಥ್, ಸಂತೋಷ್, ಸಂದೀಪ್. ಕೆ., ರಮೇಶ್ ಬಾಬು, ತಿಲಕ್ ರಾಜ್ ಕಾರ್ಯಾಚರಣೆ ವೇಳೆ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *