ಬಂಟ್ವಾಳ: : ಅಂತರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಸಾಗಾಟ ವಿರೋದಿ ದಿನಾಚರಣೆ ಬಗ್ಗೆ ಕಾರ್ಯಗಾರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕಾವಳಪಡೂರು ಪ.ಪೂ.ಕಾಲೇಜಿನಲ್ಲಿ ಜರಗಿತು.

ಕಾಲೇಜಿನ ಪ್ರಾಂಶುಪಾಲ ಮರಿಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪಿ.ಎಸ್.ಐ ನಾಗರಾಜ್. ಹೆಚ್.ಇ. ಅವರು ಪ್ರಾಸ್ತವಿಕವಾಗಿ ಮಾತನಾಡಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ, ಕಾಲೇಜು ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾದಕ ದ್ರವ್ಯ ವಿರೋದಿ ದಿನಾಚರಣೆ ಬಗ್ಗೆ ಪ್ರತಿಜ್ಞಾವಿದಿ ಸ್ವೀಕರಿಸಲಾಯಿತು. ಪ್ರತಿಜ್ಞಾ ವಿದಿಯನ್ನು ಸಂಪನ್ಮೂಲ ವ್ಯಕ್ತಿ ಬಿ.ಸಿ.ರೋಡ್ ಮಾಸ್ಟರ್ ಟ್ಯುಟೇರಿಯಲ್ನ ಮ್ಯಾನೆಜಿಂಗ್ ಟೈರೆಕ್ಟರ್, ಪ್ರಾಂಶುಪಾಲ ಬಿ. ವೆಂಕಟೇಶ್ ನಾಯಕ್ ಅವರು ಬೋಸಿದರು.
ಪ್ರಾಧ್ಯಾಪಕಿ ಶಾಂತಿ ಅವರು ಕಾರ್ಯಕ್ರಮ ನಿರೂಪಿಸಿದರು.
