ಮಂಗಳೂರು: ಮಕ್ಕಳ ದಂತ ವಿಭಾಗ, ಯೆನೆಪೋಯ ದಂತ ವ್ಯೆದ್ಯಕೀಯ ಕಾಲೇಜಿನ ವತಿಯಿಂದ “ನೈಟ್ರೋಸ್ ಒಕ್ಸೆಡ್‍ನ ಸೇವನೆಯ ಪ್ರಭಾವ- ಒಂದು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ” ಎಂಬ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

manglore

ಈ ಕಾರ್ಯಕ್ರಮವನ್ನು ಶ್ರೀ ಸಾಯಿ ದಂತ ಕಾಲೇಜಿನ , ವಿಕಾರಬಾದ್, ಚುನಾಯಿತ ಅಧ್ಯಕ್ಷರಾದ ಡಾ. ಪ್ರೊ. ಶ್ರೀನಿವಾಸ್ ನಾಮನೆನಿರವರು ನ. 16 ಮತ್ತು ನ.17 ರಂದು ನಡೆಸಿಕೊಟ್ಟರು. ಯೆನೆಪೋಯ ದಂತ ಕಾಲೇಜಿನ ಪ್ರಾಂಶುಪಾಲಾರಾದ ಡಾ. ಬಿ ಎಚ್ ಶ್ರೀಪತಿ ರಾವ್‍ರವರು ಕಾರ್ಯಕ್ರಮ ಉದ್ಘಾಟಿಸಿದರು.

ಯೆನೆಪೋಯ ದಂತ ಕಾಲೇಜಿನ ಉಪ ಪ್ರಾಂಶುಪಾಲ ಡಾ| ಶ್ಯಾಮ್ ಎಸ್ ಭಟ್ ,  ಇವರು ಕಾರ್ಯಗಾರದಲ್ಲಿ ನೆರೆದಿರುವ ಅತಿಥಿಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿದರು. ಮಕ್ಕಳ ದಂತ ವಿಭಾಗ ಪ್ರೊ. ಡಾ. ಸಂದಿಪ್ ಹೆಗ್ಡೆ ಕೆ.  ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಡಾ. ಶರಣ್ ಎಸ್. ಸರ್ಗೊಡ್ ಇವರು ಕಾರ್ಯಕ್ರಮವನ್ನು ವಂದಿಸಿದರು. ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಶನ್ ನ ಕಾರ್ಯದರ್ಶಿ  ಡಾ. ಅಖ್ತರ್ ಹುಸೈನ್    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

By Suddi9

Leave a Reply

Your email address will not be published. Required fields are marked *