ಮೂಡುಬಿದಿರೆ: ಕಳೆದ 12 ವರ್ಷಗಳಿಂದ ನಾಡು-ನುಡಿಯಲ್ಲಿ ಹೊಸತನದ ಮುನ್ನುಡಿ ಬರೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ಈ ಬಾರಿ ಮತ್ತಷ್ಟು ಹೊಸತನಗಳು ಸೇರಿಕೊಂಡಿದೆ. ಸಾಂಪ್ರದಾಯಿಕ ಅಡಿಪಾಯ,ಹೊಸತನಗಳ ಹುಡುಕಾಟಗಳೊಂದಿಗೆ ನುಡಿಸಿರಿಯ ಮೂಲಕ ಪ್ರಯೋಗಶೀಲತನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಾಯ್ದಕೊಂಡಿದೆ.

count-down

ಸಿರಿಗಳ ಗರಿ:
2013ರ ವಿಶ್ವನುಡಿಸಿರಿ ಸಂದರ್ಭ ಪ್ರಾರಂಭವಾಗಿದ್ದ ವಿದ್ಯಾರ್ಥಿಸಿರಿ ಹಾಗೂ ಕೃಷಿಸಿರಿಯು ಎಂದಿನಂತೆ ಈ ಬಾರಿಯೂ ನುಡಿಸಿರಿ ಜೊತೆಗೆ ನಡೆಯಲಿದೆ. ಕೃಷಿಸಿರಿಯಲಿ 150ಕ್ಕೂ ಅಧಿಕ ಕೃಷಿ ಮಳಿಗೆಗಳು ಕೃಷಿ ವಿಚಾರ ಸಂಕಿರಣದೊಂದಿಗೆ ಈ ಬಾರಿ ಸುಮಾರು 25 ವಿವಿಧ ತಳಿಗಳ ಶ್ವಾನ ಪ್ರದರ್ಶನ, 60ಕ್ಕೂ ಮಿಕ್ಕಿ ಬೃಹತ್ ಗಾತ್ರದ ಮತ್ಸ್ಯಾಲಯಗಳು, ಮತ್ಸ್ಯ ಕಾರಂಜಿಗಳು ವಿಶೇಷ ಆಕರ್ಷಣೆಯಾಗಲಿದೆ.

ಕಳೆದ ಒಂದು ದಶಕದಿಂದ ನುಡಿಸಿರಿಗೆ ಪೂರಕವಾಗಿ ಹಮ್ಮಿಕೊಳ್ಳಲಾಗುತ್ತಿರುವ ರಾಜ್ಯಮಟ್ಟದ ಕಲಾಶಿಬಿರ ಚಿತ್ರಸಿರಿ ಮಾದರಿಯಲ್ಲಿ ಛಾಯಾಚಿತ್ರಸಿರಿಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಧಕ ಆಳ್ವಾಸ್ ಛಾಯಾಚಿತ್ರಸಿರಿ ಪ್ರಶಸ್ತಿ ನೀಡಲಾಗುತ್ತದೆ. ಛಾಯಾಚಿತ್ರಸಿರಿಗೆ ಪೂರಕವಾಗಿ ಈಗಾಗಲೇ ನಾಲು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ 4 ಸಾವಿರಕ್ಕೂ ಅಧಿಕ ಛಾಯಾಚಿತ್ರಗಾರರು ಭಾಗವಹಿಸಿದ್ದಾರೆ.

ಆಳ್ವಾಸ್ ನುಡಿಸಿರಿಯಲ್ಲಿ ಬರುವ ರಂಗ ಚಟುವಟಿಕೆಗಳು ಆಳ್ವಾಸ್ ರಂಗಸಿರಿಯಲ್ಲಿ, ಯಕ್ಷಗಾನಕ್ಕೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳು ಯಕ್ಷಸಿರಿಯ ಚೌಕಟ್ಟಿನಲ್ಲಿ ಮೂಡಿಬರಲಿದೆ. ಕರ್ನಾಟಕ ರಾಜ್ಯ ಬಾಡಿಬಿಲ್ಡಿಂಗ್ ಸಂಸ್ಥೆ ಹಾಗೂ ದ.ಕ. ಜಿಲ್ಲಾ ಬಾಡಿಬಿಲ್ಡಿಂಗ್ ಸಂಸ್ಥೆ ಇವುಗಳ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರದೊಂದಿಗೆ ನುಡಿಸಿರಿಯಲ್ಲಿ ಮಿ.ಆಳ್ವಾಸ್ ನುಡಿಸಿರಿ ಎನ್ನುವ ದೇಹದಾಢ್ರ್ಯ ಸ್ಪರ್ಧೆ ನಡೆಯಲಿದ್ದು ಯುವಸಮೂಹವನ್ನು ಆಕರ್ಷಿಸಲಿದೆ.

By Suddi9

Leave a Reply

Your email address will not be published. Required fields are marked *