ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನಗರದ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್ ನಿಂದ ನೀರಿಗೆ ಧುಮುಕುವ ಕ್ಲೈಮ್ಯಾಕ್ಸ್ ಸನ್ನಿವೇಶದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರು ಸಹನಟರು ವಿಧಿವಶರಾದಂತಹ ಘಟನೆ ನ.7ರಂದು ಸಂಭವಿಸಿತ್ತು. 72 ಗಂಟೆಗಳ ಕಾರ್ಯಾಚರಣೆ ಬಳಿಕ ನ.10ರಂದು ಮುಂಜಾನೆ 5.50 ಗಂಟೆಗೆ ತಿಪ್ಪೆಗೊಂಡನಹಳ್ಳಿ ಡ್ಯಾಂ ನಲ್ಲಿ ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿದ್ದ ಅನಿಲ್ ಶವ ಪತ್ತೆಯಾಗಿದೆ.  ಜಲಾಶಯದ ಗಿಡಗಂಟೆಗಳಲ್ಲಿ ಸಿಲುಕಿದ್ದ ಅನಿಲ್ ಮೃತದೇಹ. ಅನಿಲ್ ಮೃತದೇಹನ್ನು ಡ್ಯಾಂನ ಬಳಿಯೇ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪಣಂಬೂರು ನುರಿತ ಮುಳುಗು ತಜ್ಞರಿಂದ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆಯಲ್ಲಿ ಶವ ಪತ್ತೆಯಾಗಿದೆ.

2

By suddi9

Leave a Reply

Your email address will not be published. Required fields are marked *