ಕೈಕಂಬ: ಪಾಂಪೈ ಮಾತೆ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವದ ಪ್ರಯುಕ್ತ ಪರಮ ಪ್ರಸಾದದ ದಿವ್ಯ ಬಲಿ ಮೆರವಣಿಗೆ(ಕೊಂಪ್ರಿಚೋ ಆಯ್ತಾರ್) ಪಾಂಪೈ ಮಾತೆ ದೇವಾಲಯದಿಂದ ಕೈಕಂಬ ಜಂಕ್ಷನ್‌ವರೆಗೆ ನಡೆಯಿತು.
ಈ ವೇಳೆ ದೇವರ ಪರಮ ಪ್ರಸಾದವನ್ನು ಸಾರ್ವಜನಿಕವಾಗಿ ಆರಾಧಿಸಲಾಯಿತು. ಬಂಟ್ವಾಳ ವಲಯದ ಬಾಂಬಿಲ್ ಚರ್ಚ್‌ನ ಧರ್ಮಗುರು ಸ್ಟ್ಯಾನಿ ಮೊಂತೆರೋ ಇವರು ದೇವರ ಪ್ರವಚನ ನೀಡಿ, ದೇವರ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.
ಇದೇ ಮಂಗಳವಾರ ೮ರಂದು ದೇವಾಲಯದಲ್ಲಿ ಸಂಜೆ ಆರು ಗಂಟೆಗೆ ಬೆಸ್ಪ್ ಕಾರ್ಯಕ್ರಮ ನಡೆಯಲಿದೆ. ಈ ಪ್ರಯುಕ್ತ ಪೊಂಪೈ ಮಾತೆಯ ದೇವಾಲಯದ ದ್ವಾರದಿಂದ ಚರ್ಚ್‌ವರೆಗೆ ಮೆರವಣಿಗೆ ನಡೆಯಲಿದೆ. ಮತ್ತು ಬುಧವಾರ ೯ರಂದು ವಾರ್ಷಿಕ ಮಹೋತ್ಸವ ನಡೆಯಲಿದೆ ಎಂದು ಚರ್ಚ್‌ನ ಫಾದರ್ ಆಂಟ್ಯನಿ ಲೋಬೋ ತಿಳಿಸಿದ್ದಾರೆ. ಸ್ನೇಹ ಸದನದ ಧರ್ಮಗುರುಗಳಾದ ಫಾ. ತೇಜಿ ಇನ್ನಿತರರು ಉಪಸ್ಥಿತರಿದ್ದರು.

1

2 3

4

5

By suddi9

Leave a Reply

Your email address will not be published. Required fields are marked *