ಬಂಟ್ವಾಳ: ವೈಜ್ಞಾನಿಕತೆಯು ಬೆಳೆದಂತೆ ಸಾಂಪ್ರದಾಯಿಕವಾಗಿ ಬೇರೂರಿದ ಸಂಸ್ಕೃತಿಯು ನಾಶವಾಗುತ್ತಿರುವುದು ವಿಪರ್ಯಾಸವೇ ಸರಿ. ಅಂತಹುದರಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮಟ್ಟದಲ್ಲಿಯೇ ವ್ಯವಸಾಯದ, ಹಬ್ಬ ಹರಿದಿನಗಳ ಕುರಿತು ತಿಳಿಸಿದಾಗ ನಮ್ಮ ದೇಶದ ಸಂಸ್ಕೃತಿಯು ಇನ್ನಷ್ಟು ಬಲಗೊಳ್ಳುವುದು ಈ ನಿಟ್ಟಿನಲ್ಲಿ ಮಜಿ ಶಾಲೆಯಲ್ಲಿ ವಿದ್ಯಾರ್ಥಿಗಳೇ ಬೆಳೆಸಿದ ಭತ್ತದ ಪೈರಿನ ಕೊಯ್ಲು ಹಾಗೂ ಹೊಸ ಅಕ್ಕಿ ಊಟದ ಕಾರ್ಯಕ್ರಮವು ಒಂದು ಉತ್ತಮ ಸಂದೇಶವಾಗಿದೆ ಎಂದು ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

manjula

ಎಸ್.ಡಿ.ಎಂ..ಸಿ. ಅಧ್ಯಕ್ಷ ಸಂಜೀವ ಮೂಲ್ಯರವರು ಸಂಪ್ರಾದಾಯಿಕವಾಗಿ ಗದ್ದೆಗೆ ಬೆಳೆಗೆ ಹಾಲು, ವೀಳ್ಯವಿಡುವ ಮೂಲಕ ಕೊಯ್ಲು ನಡೆಸಲು ಚಾಲನೆ ನೀಡಿದರು, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಒಡಿಯೂರು ಹಾಗೂ ಧರ್ಮಸ್ಥಳದ ಒಕ್ಕೂಟದ ಸದಸ್ಯರು, ಎಸ್.ಕೆ.ಪಿ.ಎ. ಬಂಟ್ವಾಳ ವಲಯದ ಸದಸ್ಯರು ಸೇರಿ ಭತ್ತದ ಪೈರನ್ನು ಕಟಾವು ಮಾಡಿ ವಾದ್ಯದ ಘೋಷಣೆಯೊಂದಿಗೆ ಶಾಲಾ ಮೈದಾನಕ್ಕೆ ತಂದು ಶಾಲೆ ತುಂಬಿಸುವ ಕಾರ್ಯಕ್ರಮ ನಡೆಸಲಾಯಿತು.

manju-3

ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‍ರವರು ಶಿಕ್ಷಣದಲ್ಲಿ ಮಾಡುತ್ತಿರುವ ವೈಭವೀಕರಣದ ಆಕರ್ಷಣೆಯು ಕ್ಷಣಿಕವಾಧುದು. ಅದರಲ್ಲಿ ಪಡೆದ ಜ್ಞಾನ ಗಟ್ಟಿಯಾಗಿ ಬೆಳೆಯಲು ಕಷ್ಟ ಸಾಧ್ಯ, ಆದರೆ ನೊಡಿಕಲಿ – ಮಾಡಿಕಲಿ ಎಂಬಂತೆ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಯ ಮೂಲಕ ಅನುಭವವು ಉತ್ತಮ ಕಲಿಕೆಯನ್ನು ನೀಡುವುದಲ್ಲದೇ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಶಾಲಾ ಮಟ್ಟದಲ್ಲಿ ನಡೆಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯವಾದುದು ಎಂದು ಅಭಿನಂಧಿಸಿದರು.

manjula-2

ಬಂಟ್ವಾಳದ ಉದಯವಾಣಿ ಪತ್ರಿಕಾ ವರದಿಗಾರ ಶ್ರೀ ರಾಜಾ ಬಂಟ್ವಾಳರವರು ಮನೆ ತುಂಬಿಸುವ ಹಾಗೂ (ಪುದ್ವಾರ) ಹೊಸ ಅಕ್ಕಿ ಊಟ ಎಂದರೇನು ? ಅದಕ್ಕೆ ಬಳಸುವ ಸಾಮಾಗ್ರಿಗಳು, ಅದರ ಉಪಯೋಗ, ಕಾರಣ, ಮಾನವನ ಜೀವನದಲ್ಲಿ ಅದರಿಂದ ಸಂಬಂಧಿತವಾದ ವಿಚಾರಗಳು, ಬೆಳೆದು ಬಂದದಾರಿ, ಇತಿಹಾಸ, ಭೌತಿಕ ಹಾಗೂ ಆಧ್ಯಾತ್ಮಿಕವಾಗಿರುವ ಸಂಬಂಧಗಳು, ಹಬ್ಬ ಹರಿದಿನಗಳಲ್ಲಿ, ಮನೆಗಳಲ್ಲಿ ನಡೆಸಲಾಗುವ ಸಹಭೋಜನ, ನಮ್ಮಲ್ಲಿ ಬಂಧುತ್ವ ಹಾಗೂ ಒಗ್ಗಟ್ಟನ್ನು ಬಿಂಬಿಸುವ ಕಾರ್ಯಗಳಾಗಿವೆ ಎಂಬುದಾಗಿ ಕಾರ್ಯಕ್ರಮದ ಕುರಿತು. ವಿಚಾರಗಳನ್ನು ತಿಳಿಸಿದರು.

ಎಸ್.ಕೆ.ಪಿ.ಎ. ಬಂ. ತಾಲೂಕು ಅಧ್ಯಕ್ಷರಾದ ಸುಕುಮಾರ್‍ರವರು ಶಿಕ್ಷಣದಲ್ಲಿ ವಿನೂತನ ರೀತಿಯ ಕಾರ್ಯಕ್ರಮಗಳನ್ನು ನಡಸುವ ಮೂಲಕ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕ ಕಲಿಕೆ ಮೂಡಿಸಬೇಕು, ಸಂಘ ಸಂಸ್ಥೆಗಳ ಸಹಕಾರವು ಶಾಲೆ ಹಾಗೂ ಪರಿಸರದ ನಡುವೆ ಉತ್ತಮ ಬಾಂಧವ್ಯವನ್ನು, ಒಗ್ಗಟ್ಟಿನ್ನು ಬಿಂಬಿಸುತ್ತದೆ. ಎಂದು ತಿಳಿಸಿದರು.

ಧ.ಗ್ರಾ.ಯೋ. ಕೃಷಿ ಅಧಿಕಾರಿ ನಾರಾಯಣರವರು ರೈತನ ಜೀವನವು ಇತರರಿಗೆ ಮಾದರಿಯಾಬೇಕು, ಇಂದು ನಮ್ಮ ಕೃಷಿ ನಾಡು ಸಾಂಪ್ರದಾಯಿಕ ಹಾಗೂ ವೈಜ್ಞಾನಿಕತೆಯ ಜೊತೆಗೆ ಬೆಳೆಯುತ್ತಿದೆ, ಆಹಾರವು ದೈವತ್ವದ ಸಂಕೇತ ಎಂಬ ಭಾವನೆಯು ಬೆಳೆದಾಗ ಒಂದೊಂದು ಅಗುಳಿನ ಮಹತ್ವವು ತಿಳಿಯಲು ಸಾದ್ಯವೆಂದು ತಿಳಿಸಿದರು.

ಬಳಿಕ ಪೈರನ್ನು ಸಾಂಪ್ರದಾಯಿಕ ರೀತಿಯಲ್ಲಿ ಬಡಿಯುವಿಕೆ, ತೂರುವುದರ ಮೂಲಕ ಜೊಳ್ಳ ಕಾಳುಗಳ ವಿಂಗಡಣೆ, ಇತರ ಶುಚಿತ್ವದ ಕೆಲಸಗಳು, ಸೇರು, ಕಳಸೆಗಳ ಮೂಲಕ ನಡೆಸುವ ಅಳತೆಗಳನ್ನು ಪ್ರಾತ್ಯಕ್ಷಿಯ ಮೂಲಕ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ತಾ. ಪಂ. ಸದಸ್ಯೆ ಗೀತಾ ಚಂದ್ರಶೇಖರ್, ಬಂ. ದೈ.ಶಿ. ನಿರ್ದೇಶಕ ಗುರುನಾಥ ಬಾಗೇವಾಡಿ, ಬಿ.ಆರ್.ಪಿ. ನಾರಾಯಣ ಗೌಡ, ಗ್ರಾ.ಪಂ. ಸದಸ್ಯರಾದ ಜನಾರ್ಧನ ಪೂಜಾರಿ, ಪದ್ಮಾವತಿ ಎಸ್.ಕೆ.ಪಿ.ಎ.ನ ದಯಾನಂದ ಬಂಟ್ವಾಳ, ಚಿನ್ನಾ ಮೈರಾ, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಹಾಗೂ ಸದಸ್ಯರು ಒಡಿಯೂರು ಗುಂಪಿನ ಸದಸ್ಯರು, ಧ.ಗ್ರಾ.ಯೋ. ಪದಾಧಿಕಾರಿಗಳು ಹಾಗೂ ಸದಸ್ಯರು ಎಸ್.ಡಿ.ಎಂ.ಸಿ. ಸದಸ್ಯರು ಪೋಷಕರು ಭಾಗವಹಿಸಿದರು.

ವಿದ್ಯಾರ್ಥಿಗಳು ರೈತ ಗೀತೆಯ ಮೂಲಕ ಪ್ರಾರ್ಥಿಸಿ, ಮುಖ್ಯಾ ಶಿಕ್ಷಕ ನಾರಾಯಣ ಪೂಜಾಋಇ ಸ್ವಾಗತಿಸಿದರು, ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು. ಶಿಕ್ಷಕಿಯರಾದ ಶಕುಂತಳಾ, ಸಿಸಿಲಿಯಾ, ಜ್ಯೋತಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *