ಉಳ್ಳಾಲ: ಕಾಲೇಜು ಕಟ್ಟಡದಿಂದ ವಿದ್ಯಾರ್ಥಿಯೊಬ್ಬ ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಲ್ ಮದೀನ ಬಳಿ ಗುರುವಾರ ತಡರಾತ್ರಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಉಪ್ಪಿನಂಗಡಿ ನಿವಾಸಿ ಮುಝಂಮ್ಮಿಲ್(14) ಎಂದು ಹೆಸರಿಲಾಗಿದೆ.

crime-1

ಇವರ ಮೃತದೇಹವು ಗುರುವಾರ ರಾತ್ರಿ ಶಾಲಾ ವಠಾರದಲ್ಲಿ ಪತ್ತೆತಯಾಗಿದೆ. ಕಾಲೇಜು ವಿದ್ಯಾರ್ಥಿ ಮತ್ತು ಧಾರ್ಮಿಕ ಗುರುಗಳು ವಿಶೇಷ ಪ್ರಾರ್ಥನೆಗೆಂದು ಮಸೀದಿಗೆ ತೆರಳಿದ್ದರು. ಈ ಸಂದರ್ಭ ಈ ವಿದ್ಯಾರ್ಥಿ ಕುರಾನ್ ಗ್ರಂಥ ಇಡಲೆಂದು ಕೊಠಡಿಯೊಂದಕ್ಕೆ ತೆರಳಿದ್ದರು. ಬಳಿಕ ವಿದ್ಯಾರ್ಥಿ ಮೃತದೇಹವೇ ಗುರುಗಳಿಗೆ ದೊರೆತಿದ್ದು, ಮೃತ ಮುಝಂಬಿಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *