ಬಂಟ್ವಾಳ: ಇಲ್ಲಿನ ವಟಪುರ ಕ್ಷೇತ್ರ ಪಸಿದ್ಧಿಯ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 15ನೇ ವರ್ಷದ ವಿಶ್ವರೂಪ ದರ್ಶನ ಕಾರ್ಯಕ್ರಮವು ಇದೇ 6ರಂದು ಬೆಳ್ಳಿಗ್ಗೆ 4 ಗಂಟೆ ಬ್ರಾಹ್ಮಿ ಮುಹೂರ್ತದಲ್ಲಿ ನಡೆಯಲಿದೆ.
ಅಂದು ಪ್ರಾತಃ ಕಾಲ ಗಂಟೆ 4.30ರಿಂದ 7ರವರೆಗೆ ಕೃಷ್ಣ ಶರ್ಮ ಮತ್ತು ಪಡುಬಿದ್ರೆ ಭಜನಾ ಮಂಡಳಿ ಇವರಿಂದ ‘ವೇದ ನಾದ ವೈಭವಂ’ ಭಜನಾ ಕಾರ್ಯಕ್ರಮ, 5 ಗಂಟೆಗೆ ಕಾಕಡಾರತಿ, ಜಾಗರ ಪೂಜೆ ಹಾಗೂ ವಿಶೇಷಾಲಂಕೃತ ದೇವರ ದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

