ಬಂಟ್ವಾಳ: ವೀರಕಂಭ ವಲಯ ಕಾಂಗ್ರೆಸ್ ಸಭೆಯು ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಪಕ್ಷದ ವಿವಿಧ ಸಮಿತಿಗಳನ್ನು ಪುನರ್ ರಚಿಸಲಾಯಿತು.
ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ವಲಯ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ, ಪಂ.ಉಪಾಧ್ಯಕ್ಷ ನಿಶಾಂತ್ ರೈ, ಪ್ರಮುಖರಾದ ರಾಮಚಂದ್ರ ಪ್ರಭು, ದೇವದಾಸ್ ರೈ, ಜಯಂತಿ, ಕೃಷ್ಣಪ್ಪ ಪೂಜಾರಿ, ಅಬ್ದುಲ್ ಹಮೀದ್, ಹೊನ್ನಪ್ಪ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

