ಮತ್ತೆ ಬಂತು ದೀಪಾವಳಿ
ಕರಗದ ಮನಸಿಗೆ
ಸುಡುವೆ ಅರಿಶಡ್ವರ್ಗಗಳ
ವರುವರುಷ ಪಟಾಕಿಯಂದದಿ..
ಪುನಃ ಹುಟ್ಟುತಿಹುದು
ರಕ್ತಬೀಜಾಸುರನಂತೆ…
ಕತ್ತಲೆಯ ಓಡಿಸುವ
ದೀಪಾವಳಿ ವರುಷಕ್ಕೊಂದೆ ಯಾಕೆ..
ಬೇಕದು ನನಗೆ ಪ್ರತಿ ದಿನ
ಪ್ರತಿ ಕ್ಷಣದಿ..
ಕಾಯಲಾರೆ ನಾ
ವರುಷಕ್ಕೊಂದು ದೀಪಾವಳಿಗೆ..
ಮಾಳ ಸುಜಿತ್ ಶೆಟ್ಟಿ


